ಪಟ್ನಾ: ರಣಸಿಂಗ್ ಮತ್ತು ಮೋನು ಅವರ ಅಮೋಘ ಆಟದಿಂದಾಗಿ ಬೆಂಗಳೂರು ಬುಲ್ಸ್ ತಂಡವು ಭಾನುವಾರ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸೋಲಿನ ದವಡೆಯಿಂದ ತಪ್ಪಿಸಿಕೊಂಡಿತು.

ಇದರೊಂದಿಗೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಎದುರಿನ ಪಂದ್ಯವು ರೋಚಕ ಟೈ ಆಯಿತು.

ಪಾಟಲೀಪುತ್ರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು 28–28ರ ಸಮಬಲ ಸಾಧನೆ ಮಾಡಿದವು. ಪಂದ್ಯದ ಪ್ರಥಮಾರ್ಧದಲ್ಲಿ ಬೆಂಗಳೂರು ತಂಡವು 15–11ರಿಂದ ಮುನ್ನಡೆಯಲ್ಲಿತ್ತು.

ವಿರಾಮದ ನಂತರ ವೇಗದ ಆಟಕ್ಕೆ ಒತ್ತು ನೀಡಿದ ಜೈಪುರ ತಂಡದವರು ಪಟಪಟನೇ ಪಾಯಿಂಟ್ ಕಲೆಹಾಕಿದರು. ಇದರಿಂದಾಗಿ ಒಂದು ಹಂತದಲ್ಲಿ ಬೆಂಗಳೂರು ತಂಡವು ತುಸು ಹಿನ್ನಡೆಯಲ್ಲಿತ್ತು. ಈ ಹಂತದಲ್ಲಿ ಬುಲ್ಸ್ ರೇಡರ್ ಮೋನು (6) ಮತ್ತು ರಣಸಿಂಗ್ (5) ಚುರುಕಿನ ಆಟದ ಮೂಲಕ ತಂಡದ ಸೋಲಿನ ಅಪಾಯವನ್ನು ತಪ್ಪಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡವು 50–34 ರಿಂದ ಯು ಮುಂಬಾ ವಿರುದ್ಧ ಜಯಗಳಿಸಿತು. ತಲೈವಾಸ್ ತಂಡದ ರೇಡರ್ ನರೇಂದರ್ 13 ಅಂಕ ಗಳಿಸಿದರು. ಅಜಿಂಕ್ಯ ಪವಾರ್ ಕೂಡ 10 ಅಂಕ ಕಲೆಹಾಕಿ ತಂಡದ ಜಯಕ್ಕೆ ಕಾಣಿಕೆ ನೀಡಿದರು.

ಇಂದಿನ ಪಂದ್ಯಗಳು: ಹರಿಯಾಣ ಸ್ಟೀಲರ್ಸ್–ಬೆಂಗಾಲ್ ವಾರಿಯರ್ಸ್

ಪಟ್ನಾ ಪೈರೇಟ್ಸ್–ಗುಜರಾತ್ ಜೈಂಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.