ಮುಂಬೈ: ಅರ್ಜುನ್ ದೇಶ್ವಾಲ್ ಅವರ ಅಮೋಘ ರೈಡಿಂಗ್ (17 ಪಾಯಿಂಟ್ಸ್) ನೆರವಿನಿಂದ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪ್ರೊ ಕಬಡ್ಡಿ ಲೀಗ್ನಲ್ಲಿ ಶನಿವಾರ 41–31 ಪಾಯಿಂಟ್ಗಳಿಂದ ಯು ಮುಂಬಾ ತಂಡಕ್ಕೆ ತವರಿನಲ್ಲಿ ಸೋಲುಣಿಸಿತು.

ಯು ಮುಂಬಾ ಪರ ಗುಮನ್ ಸಿಂಗ್ 13 ಪಾಯಿಂಟ್ಸ್ ಗಳಿಸಿದರು. ಆದರೆ ಮುಂಬೈ ರಕ್ಷಣಾ ವಿಭಾಗ ದುರ್ಬಲವಾಗಿದ್ದರಿಂದ ದೇಶ್ವಾಲ್, ಅಜಿತ್ (6) ಸಾಕಷ್ಟು ಪಾಯಿಂಟ್ಸ್ ಹೆಕ್ಕಿದರು.

ಪಿಂಕ್ ಪ್ಯಾಂಥರ್ಸ್ ಮೂರನೇ ಸ್ಥಾನದಲ್ಲಿದೆ.

ಪ್ರಬಲ ಗುಜರಾತ್ ಜೈಂಟ್ಸ್ ಇನ್ನೊಂದು ಪಂದ್ಯದಲ್ಲಿ, ತಳದಲ್ಲಿರುವ ತೆಲುಗು ಟೈಟನ್ಸ್ ಮೇಲೆ 37–30 ಪಾಯಿಂಟ್ಸ್ ಅಂತರದ ಜಯ ಗಳಿಸಿತು. ಜೈಂಟ್ಸ್ ಪರ ರಾಕೇಶ್ (10) ರೈಡಿಂಗ್ನಲ್ಲಿ ಮಿಂಚಿದರೆ, ರಕ್ಷಣಾ ವಿಭಾಗದಲ್ಲಿ ರೈಟ್ ಕವರ್ ಆಟಗಾರ ದೀಪಕ್ 9 ಪಾಯಿಂಟ್ಸ್ ಗಳಿಸಿದರು. ಜೈಂಟ್ಸ್ ಈಗ 39 ಪಾಯಿಂಟ್ಸ್ ಗಳಿಸಿ ಎರಡನೇ ಸ್ಥಾನದಲ್ಲಿದೆ.

ಟೈಟನ್ಸ್ ಪರ ಪವನ್ ಶೆರಾವತ್ 8 ಪಾಯಿಂಟ್ಸ್ ಗಳಿಸಲಷ್ಟೇ ಶಕ್ತರಾದರು. ಈ ತಂಡಕ್ಕೆ 10 ಪಂದ್ಯಗಳಲ್ಲಿ ಇದು ಒಂಬತ್ತನೇ ಸೋಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.