ಪುಣೆ: ರೋಚಕ ಹಣಾಹಣಿಯಲ್ಲಿ ಬೆಂಗಳೂರು ಬುಲ್ಸ್ ತಂಡವು ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಜಯಿಸಿತು.

ಬಾಳೆವಾಡಿಯ ಶ್ರೀ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 36–33ರಿಂದ ಹರಿಯಾಣದ ವಿರುದ್ಧ ಗೆದ್ದಿತು.

ಮಿಂಚಿನ ದಾಳಿ ನಡೆದಿ ನೀರಜ್ ನರ್ವಾಲ್ (9) ಹಾಗೂ ರಕ್ಷಣೆಯಲ್ಲಿ ಉತ್ತಮವಾಗಿ ಆಡಿದ ನಾಯಕ ಮಹೇಂದರ್ ಸಿಂಗ್ ಗೆಲುವಿನ ರೂವಾರಿಗಳಾದರು.

ಪ್ರಥಮಾರ್ಧದಲ್ಲಿ ಬೆಂಗಳೂರು ತಂಡವು 27–11ರಿಂದ ದೊಡ್ಡ ಅಂತರ ಸಾಧಿಸಿತ್ತು. ಆದರೆ ವಿರಾಮದ ನಂತರ ಹರಿಯಾಣ ಆಟಗಾರರು ದಿಟ್ಟ ತಿರುಗೇಟು ನೀಡಿದರು. ಇದರಿಂದಾಗಿ ಪಂದ್ಯವು ಕುತೂಹಲ ಕೆರಳಿಸಿತು. ಈ ಅವಧಿಯಲ್ಲಿ ಬೆಂಗಳೂರು 9–22ರಿಂದ ಭಾರಿ ಹಿನ್ನಡೆ ಅನುಭವಿಸಬೇಕಾಯಿತು. ಆದರೆ ಪಂದ್ಯ ಮುಗಿದಾಗ ಬೆಂಗಳೂರು ತಂಡವು ಮೂರು ಪಾಯಿಂಟ್‌ಗಳ ಅಂತರದಿಂದ ಜಯಿಸಿ ನಿಟ್ಟುಸಿರು ಬಿಟ್ಟಿತು. ಹರಿಯಾಣ ತಂಡದ ಮೀತು ಶರ್ಮಾ (10) ಹಾಗೂ ಮಂಜೀತ್ (8) ಮಿಂಚಿದರು.

ಪುಣೇರಿಗೆ ರೋಚಕ ಜಯ: ಆತಿಥೇಯ ಪುಣೇರಿ ಪಲ್ಡನ್ ತಂಡವು 35–34ರಿಂದ ತಮಿಳ್ ತಲೈವಾಸ್ ವಿರುದ್ಧ ರೋಚಕ ಜಯಸಾಧಿಸಿತು.

ಪುಣೇರಿ ತಂಡದ ಅಸ್ಲಂ ಇನಾಮದಾರ್ (6), ಫಜಲ್ ಅತ್ರಾಚಲಿ (5) ಮಿಂಚಿದರು. ತಲೈವಾಸ್ ಬಳಗದ ನರೇಂದರ್ (10) ರೇಡಿಂಗ್‌ನಲ್ಲಿ ಗಮನ ಸೆಳೆದರು.

ಪಂದ್ಯದ ಪ್ರಥಮಾರ್ಧದಲ್ಲಿ ತಲೈವಾಸ್ ತಂಡವು 18–12ರಿಂದ ಮುಂದಿತ್ತು. ಆದರೆ ನಂತರದ ಅವಧಿಯಲ್ಲಿ ಮಿಂಚಿನ ಆಟವಾಡಿದ ಪುಣೇರಿ ತಂಡವು ತನ್ನ ಅಭಿಮಾನಿಗಳನ್ನು ನಿರಾಶೆಗೊಳಿಸಲಿಲ್ಲ. ಈ ಅವಧಿಯಲ್ಲಿ 23 ಅಂಕಗಳನ್ನು ಗಳಿಸಿತು. ತಲೈವಾಸ್ 16 ಅಂಕ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.