ಪುಣೆ: ಉತ್ತರಾರ್ಧದಲ್ಲಿ ಇರಾನ್‌ನ ಅಮೀರ್‌ಮೊಹಮ್ಮದ್ ಝಫರ್‌ದಾನೇಶ್ ಅವರ ಅತ್ಯುತ್ತಮ ರೈಡಿಂಗ್ ನೆರವಿನಿಂದ ಯು ಮುಂಬಾ ತಂಡ, ತೀವ್ರ ಹೋರಾಟದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಶುಕ್ರವಾರ 42–40 ಪಾಯಿಂಟ್‌ಗಳಿಂದ ಪಟ್ನಾ ಪೈರೇಟ್ಸ್ ತಂಡವನ್ನು ಸೋಲಿಸಿತು.

ಬಾಲೇವಾಡಿಯ ಶ್ರೀಶಿವಛತ್ರಪತಿ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಪುಣೆ ಲೆಗ್‌ನ ಈ ಮೊದಲ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ವಿರಾಮದ ವೇಳೆಗೆ 21–18 ರಿಂದ ಮುಂದಿತ್ತು. ಈ ಮುನ್ನಡೆಗೆ ಪಟ್ನಾದ ಪ್ರಮುಖ ರೈಡರ್ ಸಚಿನ್ ಕಾರಣರಾಗಿದ್ದರು.

ಆದರೆ, ಉತ್ತರಾರ್ಧದಲ್ಲಿ ಝಫರ್‌ದಾನೇಶ್ ‘ಸೂಪರ್‌ಟೆನ್’ ಮೂಲಕ ಮುಂಬೈ ಮುನ್ನಡೆಗೆ ನೆರವಾದರು. ಅವರು 13 ಪಾಯಿಂಟ್ಸ್ ಕಲೆಹಾಕಿದರು. ರೈಡರ್ ಗುಮನ್ ಎಂಟು ಪಾಯಿಂಟ್ಸ್ ಗಳಿಸಿದರೆ, ನಾಯಕ ಸುರೇಂದರ್ ಸಿಂಗ್ ನಾಲ್ಕು ಟ್ಯಾಕಲ್ ಪಾಯಿಂಟ್ಸ್ ಗಳಿಸಿದರು.

ಪಟ್ನಾ ತಂಡದ ಪ್ರಮುಖ ರೈಡರ್ ಸಚಿನ್ ಮತ್ತೊಮ್ಮೆ ಮಿಂಚಿ ಸೂಪರ್ ಟೆನ್ (12 ಟಚ್ ಪಾಯಿಂಟ್ಸ್) ಸಾಧನೆಗೆ ಪಾತ್ರರಾದರ. ಸುಧಾಕರ್ ಏಳು ಪಾಯಿಂಟ್ಸ್ ಗಳಿಸಿದರು.

ಹರಿಯಾಣಕ್ಕೆ ಜಯ: ಹರಿಯಾಣ ಸ್ಟೀಲರ್ಸ್ ತಂಡ ಲೀಡ್‌ನ ಏರಿಳಿತ ಕಂಡ ಇನ್ನೊಂದು ಪಂದ್ಯದಲ್ಲಿ 44–39 ಪಾಯಿಂಟ್‌ಗಳಿಂದ ಆತಿಥೇಯ ಪುಣೇರಿ ಪಲ್ಟನ್ ತಂಡವನ್ನು ಸೋಲಿಸಿತು. ಹರಿಯಾಣ ಪರ ವಿನಯ್ 14 ಟಚ್ ಪಾಯಿಂಟ್ಸ್ ಸೇರಿದಂತೆ 15 ಪಾಯಿಂಟ್ಸ್ ಗಳಿಸಿ ಮಿಂಚಿದರು. ರಾಹುಲ್ ಸೆತ್ಪಾಲ್ ಆರು ಟ್ಯಾಕಲ್ ಪಾಯಿಂಟ್ಸ್ ಕಲೆಹಾಕಿದ್ದು ಕಡಿಮೆಯಲ್ಲ.

ಪುಣೇರಿ ತಂಡದ ಅಸ್ಲಂ ಮುಸ್ತಾಫಾ 9 ಪಾಯಿಂಟ್ಸ್ ಗಳಿಸಿದರು. ಮೋಹಿತ್ ಗೋಯತ್ ಈ ಪಂದ್ಯದಲ್ಲಿ ಎಂಟು ಪಾಯಿಂಟ್ಸ್ ಗಳಿಸುವ ಮೂಲಕ ಪಿಕೆಎಲ್‌ನಲ್ಲಿ 300 ರೈಡ್ ಪಾಯಿಂಟ್ಸ್ ಪೂರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.