ಮ್ಯಾಡ್ರಿಡ್: ಭಾರತದ ಪಿ.ವಿ. ಸಿಂಧು ಅವರು ಇಲ್ಲಿ ನಡೆಯುತ್ತಿರುವ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು.

ಗುರುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಸಿಂಧು 21-14, 21-12ರಿಂದ ಚೀನಾ ತೈಪೆಯ ಹುವಾಂಗ್ ಯು-ಹ್ಸುನ್ ವಿರುದ್ಧ ನೇರ ಗೇಮ್‌ಗಳಿಂದ ಜಯ ಸಾಧಿಸಿದರು.

ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ 28 ವರ್ಷದ ಸಿಂಧು ಮುಂದಿನ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಸುಪಾನಿಡಾ ಕಟೆಥಾಂಗ್ (ಥಾಯ್ಲೆಂಡ್) ಮತ್ತು ನಟ್ಸುಕಿ ನಿಡೈರಾ (ಜಪಾನ್) ನಡುವಿನ ಪಂದ್ಯದ ವಿಜೇತರನ್ನು ಎದುರಿಸುವರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಸಿಂಧು ಕೇವಲ 36 ನಿಮಿಷದಲ್ಲಿ ಕ್ವಾಲಿಫೈಯರ್ ಆಟಗಾರ್ತಿ ಹುವಾಂಗ್ ಅವರನ್ನು ಮಣಿಸಿದರು. ನಿಖರ ಆಟ ಮತ್ತು ಆಕರ್ಷಕ ಸ್ಮ್ಯಾಷ್ ಮೂಲಕ ಆರಂಭದಿಂದಲೇ ಮೇಲುಗೈ ಸಾಧಿಸಿದ್ದ ಸಿಂಧು, ಯಾವ ಹಂತದಲ್ಲೂ ಪ್ರತಿಸ್ಪರ್ಧಿಗೆ ಮುನ್ನಡೆ ಸಾಧಿಸಲು ಅವಕಾಶ ನೀಡಲಿಲ್ಲ.

ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಮತ್ತು ಸ್ವಿಸ್ ಓಪನ್‌ನಲ್ಲಿ ಪ್ರಶಸ್ತಿ ಗೆದ್ದ ಅಗ್ರಶ್ರೇಯಾಂಕದ ಕ್ಯಾರೊಲಿನಾ ಮರಿನ್ (ಸ್ಪೇನ್) ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ, ಪ್ರಶಸ್ತಿಯ ಬರ ಎದುರಿಸುತ್ತಿರುವ ಮಾಜಿ ವಿಶ್ವ ಚಾಂಪಿಯನ್ ಸಿಂಧು ಅವರಿಗೆ ಇಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಅವಕಾಶ ಹೆಚ್ಚಿದೆ. ಸಿಂಧು ಕೊನೆಯ ಬಾರಿ 2022ರ ಸಿಂಗಪುರ ಓಪನ್ ಸೂಪರ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.