ಅಡಿಲೇಡ್: ವೀರೋಚಿತ ಹೋರಾಟದಲ್ಲಿ ಗೆದ್ದ ಭಾರತದ ರೋಹನ್ ಬೋಪಣ್ಣ ಮತ್ತು ರಾಮಕುಮಾರ್ ರಾಮನಾಥನ್ ಜೋಡಿಯು ಅಡಿಲೇಡ್ ಇಂಟರ್ನ್ಯಾಷನಲ್ 1 ಎಟಿಪಿ ಟೂರ್ನಿಯ ಕ್ವಾರ್ಟರ್ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.

ಬುಧವಾರ ನಡೆದ ಪ್ರೀಕ್ವಾರ್ಟರ್ಫೈನಲ್ನಲ್ಲಿ ರೋಹನ್–ರಾಮಕುಮಾರ್ 6-7(4), 7-6(3), 10-4ರಿಂದ ಅಮೆರಿಕದ ನೇಥನಿಯಲ್ ಲ್ಯಾಮೊನ್ಸ್ ಮತ್ತು ಜಾಕ್ಸನ್ ವಿಥ್ರೊ ಅವರಿಗೆ ಆಘಾತ ನೀಡಿದರು.

ಮೊದಲ ಸೆಟ್ಅನ್ನು ಕೈಚೆಲ್ಲಿದ ಭಾರತದ ಜೋಡಿಯು ಛಲ ಕಳೆದುಕೊಳ್ಳದೆ ಎರಡು ಮತ್ತು ಮೂರನೇ ಸೆಟ್ಗಳಲ್ಲಿ ಪಾರಮ್ಯ ಮೆರೆದರು.

ಎಂಟರಘಟ್ಟದ ಪಂದ್ಯದಲ್ಲಿ ರೋಹನ್–ರಾಮಕುಮಾರ್ ಅವರಿಗೆ, ಫ್ರಾನ್ಸ್– ಮೊನಾಕೊ ಜೋಡಿ ಬೆಂಜಮಿನ್ ಬೊಂಜಿ– ಹ್ಯೂಗೊ ನಿಸ್ ಮತ್ತು ಬೆಲ್ಜಿಯಂನ ಸ್ಯಾಂಡರ್ ಗಿಲ್–ಜೊರಾನ್ ಲಿಜೆನ್ ನಡುವಣ ಪ್ರೀಕ್ವಾರ್ಟರ್ಫೈನಲ್ ಪಂದ್ಯದ ವಿಜೇತರು ಎದುರಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.