ನವದೆಹಲಿ: ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಚೆಸ್ ತಾರೆ ಕೊನೇರು ಹಂಪಿ ಹಾಗೂ ಯುವ ಶೂಟಿಂಗ್ ತಾರೆ ಮನು ಭಾಕರ್ ಅವರು ಬಿಬಿಸಿ ಆಯ್ಕೆ ಮಾಡುವ ‘ಭಾರತದ ವರ್ಷದ ಮಹಿಳಾ ಕ್ರೀಡಾಪಟು‘ ಪ್ರಶಸ್ತಿಗೆ ಸೋಮವಾರ ನಾಮನಿರ್ದೇಶನಗೊಂಡಿದ್ದಾರೆ.

ಕುಸ್ತಿ ಪಟು ವಿನೇಶಾ ಪೋಗಟ್ ಹಾಗೂಏಷ್ಯನ್ ಗೇಮ್ಸ್ನ 100 ಮೀ. ಓಟದಲ್ಲಿ ಬೆಳ್ಳಿ ಪದಕ ವಿಜೇತೆ ದ್ಯುತಿ ಚಾಂದ್ ಕೂಡ ಈ ಪ್ರಶಸ್ತಿಯ ಸ್ಪರ್ಧೆಯಲ್ಲಿದ್ದಾರೆ.

ಮತದಾನದ ಮಾಡುವ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಫೆಬ್ರುವರಿ 24ರವರೆಗೆ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರೀಡಾಪಟುವಿಗೆ ಮತವನ್ನು ನೀಡಬಹುದಾಗಿದೆ. ಅಂತರರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8ರಂದು ಪ್ರಶಸ್ತಿ ವಿಜೇತರನ್ನು ಘೋಷಿಸಲಾಗುತ್ತದೆ.

ಬಿಬಿಸಿಯು ಈ ಬಾರಿ ‘ವರ್ಷದ ಉದಯೋನ್ಮುಖ ಕ್ರೀಡಾಪಟು‘ ಎಂಬ ಹೊಸ ಪ್ರಶಸ್ತಿಯನ್ನು ನೀಡುತ್ತಿದ್ದು, ಇದರ ಆಯ್ಕೆಗೆ ಮತದಾನ ಇರುವುದಿಲ್ಲ; ಬದಲಾಗಿ ಪ್ರಶಸ್ತಿ ಸಮಿತಿಯ ತೀರ್ಪುಗಾರರೇ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.