ಪ್ಯಾರಿಸ್ : ಟೋಕಿಯೊ ಒಲಿಂಪಿಕ್ ಕೂಟದ ಬೆಳ್ಳಿ ಪದಕ ವಿಜೇತ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರು ಪ್ಯಾರಿಸ್‌ನಲ್ಲಿ ಬುಧವಾರ ಕಣಕ್ಕಿಳಿಯಲಿದ್ದಾರೆ.

ದೀರ್ಘ ಅವಧಿಯಿಂದ ಅವರು ಗಾಯದ ಸಮಸ್ಯೆ ಎದುರಿಸುತ್ತಿದ್ಧಾರೆ. ಆದ್ದರಿಂದ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿಲ್ಲ. ಸಾರ್ವಜನಿಕವಾಗಿಯೂ ಹೆಚ್ಚು ಕಾಣಿಸಿಕೊಂಡಿಲ್ಲ. ಫಿಟ್‌ನೆಸ್ ಕೊರತೆಯನ್ನು ಎದುರಿಸುತ್ತಿದ್ದಾರೆ. ಇವೆಲ್ಲವನ್ನೂ ಈಗ ಹಿಂದಿಕ್ಕಿ ಮತ್ತೊಂದು ಪದಕ ಗಳಿಸುವ ಛಲದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ.

2020ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಪದಕ ಖಾತೆಯನ್ನು ಮೀರಾಬಾಯಿ ತೆರೆದಿದ್ದರು. ಹೋದ ಅಕ್ಟೋಬರ್‌ನಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಅವರು ಸೊಂಟದ ನೋವು ಅನುಭವಿಸಿದ್ದರು.

ಅದಕ್ಕೂ ಮುನ್ನ ಅವರು 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಒಟ್ಟು 201 ಕೆ.ಜಿ (88 +113) ತೂಕ ಎತ್ತಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು 202 ಕೆ.ಜಿ ತೂಕ ಎತ್ತಿದ್ದರು.

49 ಕೆ.ಜಿ ವಿಭಾಗದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ. ಚೀನಾದ ಹೌ ಝಿಹುಯಿ ಅವರ ಸ್ಪರ್ಧೆ ಎದುರಿಸಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೂ ಝಿಹುಯಿ ಚಿನ್ನ ಜಯಿಸಿದ್ದರು.

‘ಮೀರಾ 200 ಕೆ.ಜಿ ಗಿಂತ ಹೆಚ್ಚು ತೂಕವನ್ನು ಎತ್ತಬೇಕಿದೆ. ಈ ಬಾರಿ 205 ಕೆಜಿಗಿಂತ ಹೆಚ್ಚು ಹೋದರೆ ಪದಕ ಜಯಿಸುವ ಸಾಧ್ಯತೆಗಳು ಹೆಚ್ಚಬಹುದು. ಈ ಸವಾಲಿಗೆ ಪೂರ್ಣವಾಗಿ ಸಿದ್ಧರಾಗಿದ್ದೇವೆ’ ಎಂದು ಕೋಚ್ ವಿಜಯ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಣಿಪುರದ 29 ವರ್ಷದ ಮೀರಾ ಅವರು ಅಮೆರಿಕದ ಪರಿಣತ ವೈದ್ಯ ಆ್ಯರನ್ ಹಾರ್ಷಿಗ್ ಅವರಿಂದ ಚಿಕಿತ್ಸೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.