ಟೋಕಿಯೊ: ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತೀಯ ಬ್ಯಾಡ್ಮಿಂಟನ್ ಪಟು ಸಾಯಿ ಪ್ರಣೀತ್, ಚೊಚ್ಚಲ ಪಂದ್ಯದಲ್ಲೇ ಸೋಲಿಗೆ ಶರಣಾಗಿದ್ದಾರೆ.

'ಡಿ' ಗುಂಪಿನ ಪಂದ್ಯದಲ್ಲಿ ತಮಗಿಂತಲೂ ಕೆಳಗಿನ ರ್ಯಾಂಕ್ನ ಇಸ್ರೇಲ್ನ ಮಿಶಾ ಝಿಲ್ಬರ್ಮನ್ ವಿರುದ್ಧ 17-21 15-21ರ ಅಂತರದಲ್ಲಿ ಸೋಲು ಅನುಭವಿಸಿದರು.

ಇದನ್ನೂ ಓದಿ:Tokyo Olympics | ಪದಕದ ಸುತ್ತಿಗೆ ಲಗ್ಗೆಯಿಟ್ಟ ಶೂಟರ್ ಸೌರಭ್ ಚೌಧರಿ

2019ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿರುವ 15ನೇ ರ್ಯಾಂಕ್ನ ಪ್ರಣೀತ್ 41 ನಿಮಿಷಗಳ ಹೋರಾಟದಲ್ಲಿ 47ನೇ ರ್ಯಾಂಕ್ನ ಮಿಶಾ ವಿರುದ್ಧ ಪರಾಭವಗೊಂಡರು.

13ನೇ ಶ್ರೇಯಾಂಕಿತ ಪ್ರಣೀತ್ ಮುಂದಿನ ಪಂದ್ಯದಲ್ಲಿ 29ನೇ ರ್ಯಾಂಕ್ನ ಹಾಲೆಂಡ್ನ ಮಾರ್ಕ್ ಕಾಲ್ಜೌವ್ ಸವಾಲನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.