ಸೋಲ್: ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕೂಟದ ಸಿದ್ಧತೆ ಭಾಗವಾಗಿ ನೂರಾರು ಅಥ್ಲೀಟ್‌ಗಳನ್ನು ಸೇನಾ ಶಿಬಿರಕ್ಕೆ ಕಳುಹಿಸುವ ನಿರ್ಧಾರವನ್ನು ದಕ್ಷಿಣ ಕೊರಿಯಾ ಒಲಿಂಪಿಕ್ ಸಮಿತಿ ಸಮರ್ಥಿಸಿಕೊಂಡಿದೆ.

ಮಹಿಳೆಯರು ಸೇರಿದಂತೆ ಸುಮಾರು 400 ಕ್ರೀಡಾಪಟುಗಳು ಸೋಮವಾರ ಆಗ್ನೇಯ ಬಂದರು ನಗರ ಪೊಹಾಂಗ್‌ನಲ್ಲಿರುವ ಮರೈನ್ ಬೂಟ್ ಕ್ಯಾಂಪ್‌ಗೆ ಮೂರು ದಿನಗಳ ತರಬೇತಿಗಾಗಿ ಆಗಮಿಸಲಿದ್ದಾರೆ ಎಂದು ಕೊರಿಯಾದ ಕ್ರೀಡೆ ಮತ್ತು ಒಲಿಂಪಿಕ್ ಸಮಿತಿ ತಿಳಿಸಿದೆ.

ಮಾನಸಿಕವಾಗಿ ಕಠಿಣವಾಗಲಿ ಎಂಬ ಉದ್ದೇಶ ಇದರ ಹಿಂದೆ ಇದೆ ಎಂದು ಸಮಿತಿ ಹೇಳಿತ್ತು. ಸಮಿತಿ ಅಧ್ಯಕ್ಷ ಲೀ ಕೀ-ಹೆಂಗ್ ಅವರ ಈ ವಿನೂತನ ಕ್ರಮಕ್ಕೆ ರಾಜಕಾರಣಿಗಳು ಮತ್ತು ಮಾಧ್ಯಮಗಳಿಂದ ‘ಹಳೆಯ ಮಾದರಿ ಮತ್ತು ಪದಕಕ್ಕಾಗಿ ಅನಾರೋಗ್ಯಕರ ಗೀಳು’ ಎಂಬ ಟೀಕೆ ವ್ಯಕ್ತವಾಗಿತ್ತು.

ಕ್ರೀಡಾಪಟುಗಳಿಗೆ ಕಠಿಣ ರೀತಿಯ ಮಿಲಿಟರಿ ತರಬೇತಿಗೆ ಒತ್ತಾಯಿಸಲಾಗುವುದಿಲ್ಲ. ಜಾಗಿಂಗ್, ರಬ್ಬರ್ ದೋಣಿ ಸವಾರಿ ಹಾಗೂ ಇತರೆ ಚಟುವಟಿಕೆಗಳು ಇರುತ್ತವೆ. ಕ್ರೀಡಾ ಅಧಿಕಾರಿಗಳು ಶಿಬಿರದ ವಿವರಗಳನ್ನು ಅಂತಿಮಗೊಳಿಸುತ್ತಿದ್ದಾರೆ ಎಂದು ಸಮಿತಿಯ ಅಧಿಕಾರಿ ಯುನ್ ಕ್ಯೋಂಗ್-ಹೋ ಗುರುವಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.