ಉಡುಪಿ: ಕರ್ನಾಟಕದ ಎಸ್.ಲೋಕೇಶ್,ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ 31ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ಲಾಂಗ್ಜಂಪ್ನಲ್ಲಿ ನೂತನ ದಾಖಲೆ ಸ್ಥಾಪಿಸಿದರು. ಹಲವು ದಿನಗಳ ನಂತರ ಕಾಣಿಸಿಕೊಂಡ ಬಿಸಿಲು–ಸೆಕೆಯ ವಾತಾವರಣದಲ್ಲಿ ಒಟ್ಟು ಎಂಟು ಕೂಟ ದಾಖಲೆಗಳು ಮೂಡಿಬಂದವು.

ಬೆಂಗಳೂರಿನ ಲೋಕೇಶ್, ಬಾಲಕರ 20 ವರ್ಷದೊಳಗಿನವರ ವಿಭಾಗದಲ್ಲಿ 7.82 ಮೀ. ದೂರ ಜಿಗಿದು, ತಮಿಳುನಾಡಿನ ಮಾಜಿ ಅಂತರರಾಷ್ಟ್ರೀಯ ಅಥ್ಲೀಟ್ ಕುಮಾರವೇಲ್ ಪ್ರೇಮಕುಮಾರ್, ಎಂಟು ವರ್ಷಗಳ ಹಿಂದೆ ಕೊಚ್ಚಿಯಲ್ಲಿ ಸ್ಥಾಪಿಸಿದ್ದ 7.52 ಮೀ. ದಾಖಲೆ ಮುರಿದು ಪ್ರೇಕ್ಷಕರಲ್ಲಿ ಸಂತಸ ಮೂಡಿಸಿದರು.

ತಮಿಳುನಾಡಿನ ಪಿ.ಎಂ.ತಬಿತಾ, ಬಾಲಕಿಯರ 18 ವರ್ಷದೊಳಗಿನವರ ವಿಭಾಗದ 100 ಮೀ. ಹರ್ಡಲ್ಸ್ ಓಟವನ್ನು 14.34 ಸೆ.ಗಳಲ್ಲಿ ಪೂರೈಸಿ, ಕರ್ನಾಟಕದ ಮೇಘನಾ ಶೆಟ್ಟಿ ಹೆಸರಿನಲ್ಲಿದ್ದ ದಾಖಲೆ (2012ರಲ್ಲಿ 14.53 ಸೆ.) ಉತ್ತಮಪಡಿಸಿದರು. ಬೆಳಿಗ್ಗೆ ಈ ಸಾಧನೆಯ ನಂತರ ಮಧ್ಯಾಹ್ನ ಲಾಂಗ್ಜಂಪ್ನಲ್ಲಿ 5.89 ಮೀ. ದೂರ ಜಿಗಿದು ‘ಚಿನ್ನದ ಡಬಲ್’ ಪೂರೈಸಿದರು. 17 ವರ್ಷದ ತಬಿತಾ, ಎರಡೂ ಸ್ಪರ್ಧೆಗಳಲ್ಲಿ ಏಷ್ಯನ್ ಯುವ ಚಾಂಪಿಯನ್ ಆಗಿದ್ದಾರೆ.

ಮಾಜಿ ಅಂತರರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಆಟಗಾರ, ಕೇರಳದ ಜೈಶಂಕರ್ ಮತ್ತು ಆಟಗಾರ್ತಿ ಪ್ರಸನ್ನಾ ಮೆನೋನ್ ಪುತ್ರಿ ಕೃಷ್ಣಾ 18 ವರ್ಷದೊಳಗಿನ ಬಾಲಕಿಯರ ವಿಭಾಗದ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ 40.69 ಮೀ. ಸಾಧನೆಯೊಡನೆ ನೂತನ ದಾಖಲೆ ಸ್ಥಾಪಿಸಿದರು. ಕೇರಳದಲ್ಲಿ ಹುಟ್ಟಿ, ತಮಿಳುನಾಡು ಪರ ಕೆಲವು ವರ್ಷ ಸ್ಪರ್ಧಿಸಿದ್ದ ಕೃಷ್ಣಾ ಒಂದು ವರ್ಷದಿಂದ ಆಂಧ್ರಪ್ರದೇಶ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ಜಮೈಕಾದ ಕೋಚ್ ಮೈಕೆಲ್ ವಸೆಲ್ ಅವರಿಂದ ತರಬೇತಿ ಪಡೆಯುತ್ತಿರುವ ಈಕೆ ಮೂರನೇ ಯತ್ನದಲ್ಲೇ 39.77 ಮೀ. ಸಾಧನೆಯೊಡನೆ ಹಳೆಯ ದಾಖಲೆ (39.74 ಮೀ.) ಮುರಿದಿದ್ದರು. ಅಂತಿಮ ಯತ್ನದಲ್ಲಿ ಅದನ್ನು ಇನ್ನಷ್ಟು ಸುಧಾರಿಸಿದರು.

ಫಲಿತಾಂಶಗಳು ಕೆಳಕಂಡಂತೆ ಇವೆ:

ಬಾಲಕರು: 20 ವರ್ಷದೊಳಗಿನವರು: 100 ಮೀ. ಓಟ: ಸಿ.ಆರ್.ವಿಬಿನ್ ರಾಜ್ (ತಮಿಳುನಾಡು)–1, ಸ್ವಸ್ತಿಕ್ (ಕರ್ನಾಟಕ),–2, (ತಮಿಳುನಾಡು)–2, ಅಭಿನ್ ಬಿ.ದೇವಾಡಿಗ (ಕರ್ನಾಟಕ)–3, ಕಾಲ: 10.79 ಸೆ., ನೂತನ ದಾಖಲೆ: ಹಳೆಯದು: 10.86 ಸೆ. ಪ್ರವೀಣ್ ಮುತ್ತುಕುಮಾರನ್; 400 ಮೀ. ಓಟ: ಅನಂದು ವಿಜಯನ್ (ಕೇರಳ)–1, ಕೆ.ಅವಿನಾಶ್ (ತಮಿಳುನಾಡು)–2, ಉದಯಕುಮಾರ್ (ಕರ್ನಾಟಕ)–3, ಕಾಲ: 48.83 ಸೆ.; 10,000 ಮೀ. ಓಟ: ಕೆ.ಕೆ.ವೆಂಕಟೇಶ್ (ಕರ್ನಾಟಕ ,32ನಿ.16.11 ಸೆ.)–1, ಎಂ.ಮಣಿಕಂಠನ್ (ತಮಿಳುನಾಡು, 32ನಿ.54.36 ಸೆ.)–2, ಆರ್.ಅಭಿಲಾಷ್ (ತಮಿಳುನಾಡು, 32ನಿ.54.75 ಸೆ.)–3; ಕಾಲ: 32ನಿ.54.75 ಸೆ.; ಪೋಲ್ವಾಲ್ಟ್: ಎ.ಜ್ಞಾನಸೋನೆ (ತಮಿಳುನಾಡು)–1, ಎ.ಅಭಿಷೇಕ್ (ತಮಿಳುನಾಡು)–2, ರಾಜ್ ಕೆ.ಅತುಲ್ (ಕೇರಳ)–3, ಎತ್ತರ: 4.20 ಮೀ.; ಲಾಂಗ್ಜಂಪ್: ಎಸ್.ಲೋಕೇಶ್ (ಕರ್ನಾಟಕ)–1, ಆರ್.ಹೇಮಂತಬಾಬು (ತಮಿಳುನಾಡು)–2, ಎಸ್.ಸರಣ್ (ತಮಿಳುನಾಡು)–3, ದೂರ: 7.82 ಮೀ. ನೂತನ ದಾಖಲೆ, ಹಳೆಯದು: 7.52 ಮೀ.; ಷಾಟ್ಪಟ್: ಬಿ.ಮಾನುಷ್ (ಕರ್ನಾಟಕ)–1, ರಾಹುಲ್ ಕಶ್ಯಪ್ (ಕರ್ನಾಟಕ)–2, ಸತ್ಯವಾನ್ (ತೆಲಂಗಾಣ)–3, ದೂರ: 16.64 ಮೀ.; 10,000 ಮೀ. ನಡಿಗೆ: ವಿ.ಕೆ. ಅಭಿಜಿತ್ (ಕೇರಳ, 48ನಿ.28.17 ಸೆ.)–1, ಮುಹಮ್ಮದ್ ಅಫ್ಸಾನ್ (ಕೇರಳ, 49ನಿ.10.75 ಸೆ.)–2, ಕೃಷ್ಣ (ತಮಿಳುನಾಡು, 49ನಿ.27.59 ಸೆ.)–3.

18 ವರ್ಷದೊಳಗಿನವರು: 400 ಮೀ: ಜಿ.ಧನುಷ್ ಕುಮಾರ್ (ಆಂಧ್ರಪ್ರದೇಶ)–1, ಎಸ್.ನಾಗಾರ್ಜುನನ್ (ತಮಿಳುನಾಡು)–2, ಟಿ.ಗೌಶಿಕ್ (ತಮಿಳುನಾಡು)–3, ಕಾಲ: 49.31 ಸೆ.;

16 ವರ್ಷದೊಳಗಿನವರು: 100 ಮೀ.: ಎಸ್.ಕೆ.ಕಾರ್ತಿಕ್ ರಾಜ (ತಮಿಳುನಾಡು)–1, ಆರ್ಯನ್ ಮನೋಜ್ (ಕರ್ನಾಟಕ)–2, ಕಿನ್ನೇರ ದಿಲೀಪ್ (ತೆಲಂಗಾಣ)–3, ಕಾಲ: 11.32 ಸೆ.; 400 ಮೀ. ಓಟ: ಸಿ.ಎಚ್.ರಿಹಾನ್ (ಕರ್ನಾಟಕ)–1, ಕೆ.ಮಹೇಶ್ (ತೆಲಂಗಾಣ)–2, ಎ.ಅಭಿನೇಶ್ (ತಮಿಳುನಾಡು)–3, ಕಾಲ: 50.02 ಸೆ.; 100 ಮೀ. ಹರ್ಡಲ್ಸ್: ಆರ್.ಕೆ.ವಿಶ್ವಜಿತ್ (ಕೇರಳ)–1, ಬಿ.ವಿಷ್ಣುಕುಮಾರ್ (ತಮಿಳುನಾಡು)–2, ಸಾಯಿ ಸಂದೀಪ್ (ಆಂಧ್ರಪ್ರದೇಶ)–3, ಕಾಲ: 14.23 ಸೆ.

14 ವರ್ಷದೊಳಗಿನವರು: 100 ಮೀ. ಓಟ: ಗೌತಮ್ ಅಲ್ಲೂರಿ (ತೆಲಂಗಾಣ)–1, ಸಂಗಿನೇನಿ ಹರ್ಷ (ತೆಲಂಗಾಣ)–2, ಕೆ.ವೈ.ಮುತ್ತಣ್ಣ (ಕರ್ನಾಟಕ)–3, ಕಾಲ: 11.80 ಸೆ.

ಬಾಲಕಿಯರು

20 ವರ್ಷದೊಳಗಿನವರು: 100 ಮೀ. ಒಟ: ಕಾವೇರಿ (ಕರ್ನಾಟಕ)–1, ಇ.ಆನ್ಸಿ ಸೋಜನ್ (ಕೇರಳ)–2, ಎ.ಶೆರಿನ್ (ತಮಿಳುನಾಡು)–3, ಕಾಲ: 11.82 ಸೆ., ನೂತನ ದಾಖಲೆ, ಹಳೆಯದು: 12.13 ಸೆ.: 400 ಮೀ. ಓಟ: ಕೆ.ರೋಶಿನಿ (ತಮಿಳುನಾಡು)–1, ರಾಖಿ (ಕರ್ನಾಟಕ)–2, ಬಿ.ಆರತಿ (ಕೇರಳ)–3, ಕಾಲ: 57.27 ಸೆ.; 100 ಮೀ. ಹರ್ಡಲ್ಸ್: ಎಸ್.ಶ್ರೀರೇಷ್ಮಾ (ತಮಿಳುನಾಡು)–1, ಎಚ್.ವಿ.ಪೂಜಾ (ಕರ್ನಾಟಕ)–2, ಎಂ.ನಿಶಾ (ತಮಿಳುನಾಡು)–3, ಕಾಲ: 15.07ಸೆ.; 10,000 ಮೀ. ನಡಿಗೆ: ದಿವ್ಯಾ (ಕೇರಳ, 58ನಿ.05.7ಸೆ)–1, ಕೆ.ಅಕ್ಷಯಾ (ಕೇರಳ, 59ನಿ.25.2ಸೆ)–2, ವಾಣಿ (ತಮಿಳುನಾಡು, 63ನಿ.38.6ಸೆ)–3.

18 ವರ್ಷದೊಳಗಿನವರು:100 ಮೀ. ಓಟ: ಜೆ.ದೀಪ್ತಿ (ತೆಲಂಗಾಣ)–1, ಖೀಶಶಾ ತಾರಕ ಮೋದಿ (ತೆಲಂಗಾಣ)–2, ಪಿ.ಮರಿಯಾ ನಿವೇತಾ (ತಮಿಳುನಾಡು)–3, ಕಾಲ: 12.11 ಸೆ., ನೂತನ ದಾಖಲೆ, ಹಳೆಯದು: 12.27 ಸೆ.; 400 ಮೀ. ಒಟ: ಎಲ್ಗಾ ಥಾಮಸ್ (ಕೇರಳ)–1, ಕೆ.ರೆಜಿತಾ (ಆಂಧ್ರಪ್ರದೇಶ)–2, ಒಲಿಂಬಾ ಸ್ಟೆಫಿ (ತಮಿಳುನಾಡು)–3, ಕಾಲ: 57.48 ಸೆ.; 100 ಮೀ. ಹರ್ಡಲ್ಸ್: ಪಿ.ಎಂ.ತಬಿತಾ (ತಮಿಳುನಾಡು)–1, ಅಗಸರ ನಂದಿನಿ (ತೆಲಂಗಾಣ)–2, ಪದ್ಮಶ್ರೀ (ತೆಲಂಗಾಣ)–3, ಕಾಲ: 14.34 ಸೆ., ನೂತನ ದಾಖಲೆ, ಹಳೆಯದು: 14.53 ಸೆ; ಲಾಂಗ್ಜಂಪ್: ಪಿ.ಎಂ.ತಬಿತಾ (ತಮಿಳುನಾಡು)–1, ಪಿ.ಬಬಿಶಾ (ತಮಿಳುನಾಡು)–2, ಹನಿ ಜಾನ್ (ಕೇರಳ)–3, ದೂರ: 5.89 ಮೀ.; ಡಿಸ್ಕಸ್ ಥ್ರೊ: ಕೃಷ್ಣಾ ಜಯಶಂಕರ್ (ಆಂಧ್ರಪ್ರದೇಶ)–1, ಎ.ಜೆನ್ಸಿ ಸುಸಾನ್ (ತಮಿಳುನಾಡು)–2, ಪಿ.ಎ.ಅತುಲ್ಯಾ (ಕೇರಳ)–3, ದೂರ: 40.69 ಮೀ., ನೂತನ ದಾಖಲೆ, ಹಳೆಯದು: 39.74 ಮೀ.

16 ವರ್ಷದೊಳಗಿನವರು:100 ಮೀ. ಓಟ: ರುತಿಕಾ ಸರಣವನ್ (ತಮಿಳುನಾಡು)–1, ನಿಯೋಲ್ ಅನ್ನಾ ಕಾರ್ನೆಲಿಯೊ (ಕರ್ನಾಟಕ)–2, ಶೈಲಿ ಸಿಂಗ್ (ಕರ್ನಾಟಕ), ಕಾಲ: 12.35 ಸೆ, ನೂತನ ದಾಖಲೆ, ಹಳೆಯದು: 12.47 ಸೆ.; 400 ಮೀ. ಓಟ: ಪ್ರತಿಭಾ ವರ್ಗೀಸ್ (ಕೇರಳ)–1, ಮೈಥಿಲಿ (ತೆಲಂಗಾಣ)–2, ದಿಶಾ ಎ. (ಕರ್ನಾಟಕ)–3, ಕಾಲ: 57.74 ಸೆ., ನೂತನ ದಾಖಲೆ, ಹಳೆಯದು: 57.97 ಸೆ., 100 ಮೀ. ಹರ್ಡಲ್ಸ್: ಪ್ರತೀಕ್ಷಾ ಯಮುನಾ (ತಮಿಳುನಾಡು)–1, ವೈಶಾಲಿ (ತಮಿಳುನಾಡು)–2, ರುಚಿತಾ (ಕರ್ನಾಟಕ)–3, ಕಾಲ: 15.01 ಸೆ.

14 ವರ್ಷದೊಳಗಿನವರು: ಹೈಜಂಪ್: ಎಸ್.ಸುಭಿಕ್ಷಾ (ತಮಿಳುನಾಡು)–1, ಸೌಜನ್ಯಾ (ತಮಿಳುನಾಡು)–2, ಅಖಿಲಾ ಮೋಳ್ (ಕೇರಳ)–3, ಎತ್ತರ: 1.45 ಮೀ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.