ನ್ಯೂಯಾರ್ಕ್: ಮಾಡೆಲ್ ವೃತ್ತಿಯಲ್ಲಿ ತೊಡಗಿರುವ ಲೈಂಗಿಕ ಅಲ್ಪಸಂಖ್ಯಾತೆಯೊಬ್ಬರು ಕ್ರೀಡಾ ಪತ್ರಿಕೆ’ಸ್ಪೋರ್ಟ್ಸ್ ಇಲುಸ್ಟ್ರೇಟೆಡ್’ನ ಮುಖಪುಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪತ್ರಿಕೆಯು ಈ ವರ್ಷ ಈಜುಡುಗೆಯ ಕುರಿತು ವಿಶೇಷ ಸಂಚಿಕೆಯನ್ನು ಹೊರತರಲಿದ್ದು ಅದಕ್ಕಾಗಿ ಈ ಯೋಜನೆಯನ್ನು ಹಾಕಿಕೊಂಡಿದೆ.

ಬ್ರೆಜಿಲ್ನ ವ್ಯಾಲೆಂಟಿನಾ ಸಂಪಾಯೊ ಅವರನ್ನು ಪತ್ರಿಕೆ ಆಯ್ಕೆ ಮಾಡಿಕೊಂಡಿದ್ದು ಮಾಡೆಲ್ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಹೇದಿ ಕ್ಲುಮ್ ಮತ್ತು ಆ್ಯಶ್ಲೆ ಗ್ರಹಾಂ ಅವರೂ ಈ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಚಿಕೆ ಇದೇ ತಿಂಗಳ 21ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಫೋಟೊ ಗ್ಯಾಲರಿ | ಚಿತ್ರಾವಳಿ: ಸ್ವಿಮ್ ಸೂಟ್ನಲ್ಲಿ ಲೈಂಗಿಕ ಅಲ್ಪಸಂಖ್ಯಾತೆ ರೂಪದರ್ಶಿ ವ್ಯಾಲೆಂಟಿನಾ ಸಂಪಾಯೊ

‘ಈ ವಿಷಯ ತಿಳಿದು ರೋಮಾಂಚನವಾಗಿದೆ. ಪತ್ರಿಕೆಯ ಈ ನಿರ್ಧಾರದಿಂದ ನಾನು ಪುಳಕಗೊಂಡಿದ್ದೇನೆ’ ಎಂದು 23 ವರ್ಷದ ಸಂಪಾಯೊ ಅಭಿಪ್ರಾಯಪಟ್ಟಿದ್ದಾರೆ.‘ವಿವಿಧ ದ್ವೀಪಗಳಲ್ಲಿ ಈಗಾಗಲೇ ಚಿತ್ರಗಳನ್ನು ಸೆರೆಹಿಡಿಯಲಾಗಿದೆ’ ಎಂದು ಪತ್ರಿಕೆಯ ಪ್ರಕಟಣೆ ತಿಳಿಸಿದೆ.

ಈಶಾನ್ಯ ಬ್ರೆಜಿಲ್ನ ಸೀರಾ ರಾಜ್ಯದ ಮೀನುಗಾರಿಕಾ ಪ್ರದೇಶದಿಂದ ಬಂದಿರುವ ಸಂಪಾಯೊ ತಮ್ಮ ದೇಶದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದ್ದು ಅವರು ಅವಮಾನಕ್ಕೂ ಒಳಗಾಗುತ್ತಿದ್ದಾರೆ ಎಂದು ಹೇಳುತ್ತಾರೆ.

ಸ್ಪೋರ್ಟ್ಸ್ ಇಲುಸ್ಟ್ರೇಟೆಡ್ ಪತ್ರಿಕೆಯು ಅನೇಕ ವರ್ಷಗಳಿಂದ ಯುವ ಮತ್ತು ಶ್ವೇತವರ್ಣದ ಮಾಡೆಲ್ಗಳನ್ನು ಬಳಸುತ್ತಿದ್ದು ಇದೇ ಮೊದಲ ಬಾರಿ ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಯ ಮೇಲೆ ಕಣ್ಣಿಟ್ಟಿದೆ. 1997ರಲ್ಲಿ ಟೈರಾ ಬ್ಯಾಂಕ್ಸ್ ಅವರನ್ನು ಮಾಡೆಲ್ ಆಗಿ ಬಳಸುವ ಮೂಲಕ ಮೊದಲ ಬಾರಿ ಕಪ್ಪುವರ್ಣದ ವ್ಯಕ್ತಿಗೆ ಅವಕಾಶ ನೀಡಿತ್ತು.

2017ರಲ್ಲಿ ಸಂಪಾಯೊ ಅವರ ಚಿತ್ರವನ್ನು ವೋಗ್ ಪತ್ರಿಕೆ ಮುಖಪುಟದಲ್ಲಿ ಪ್ರಕಟಿಸಿತ್ತು. ಆ ಮೂಲಕ ಲೈಂಗಿಕ ಅಲ್ಪಸಂಖ್ಯಾತ ಮಾಡೆಲ್ಗೆ ಈ ಗೌರವ ನೀಡಿದ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಫ್ರಾನ್ಸ್ ಆವೃತ್ತಿಯಲ್ಲಿ ಆ ಚಿತ್ರ ಪ್ರಕಟಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.