ಬರ್ಮಿಂಗ್‌ಹ್ಯಾಮ್: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ತೇಜಸ್ವಿನ್ ಶಂಕರ್ ಕಂಚಿನ ಪದಕ ಗೆದ್ದಿದ್ದಾರೆ.

ಇದರೊಂದಿಗೆ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಹೈಜಂಪ್‌ನಲ್ಲಿ ಮೊದಲ ಪದಕ ಪ್ರಾಪ್ತಿಯಾಗಿದೆ.

ಬುಧವಾರ ನಡೆದ ಹೈಜಂಪ್ ಸ್ಪರ್ಧೆಯ ಫೈನಲ್‌ನಲ್ಲಿ ತೇಜಸ್ವಿನ್ ಅವರು 2.22 ಮೀ. ಎತ್ತರಕ್ಕೆ ಜಿಗಿಯುವ ಮೂಲಕ ಪದಕದ ಸಾಧನೆ ಮಾಡಿದ್ದಾರೆ.

ನ್ಯೂಜಿಲೆಂಡ್‌ನ ಹಮಿಶ್ ಕೇರ್ ಚಿನ್ನದ ಪದಕ ಗಳಿಸಿದರೆ, ಆಸ್ಟ್ರೇಲಿಯಾದ ಬ್ರಾಂಡನ್ ಸ್ಟಾರ್ಕ್ ಬೆಳ್ಳಿ ಗೆದ್ದುಕೊಂಡರು.

CWG 2022– ಕ್ರಿಕೆಟ್ | ಸೆಮಿಫೈನಲ್ ಪ್ರವೇಶಿಸಿದ ಭಾರತದ ಮಹಿಳೆಯರ ತಂಡ

1970ರಲ್ಲಿ ಎಡಿನ್‌ಬರ್ಗ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಭೀಮ್ ಸಿಂಗ್ 2.06 ಮೀ ಎತ್ತರ ಜಿಗಿದಿರುವುದು ಈವರೆಗಿನ ಭಾರತೀಯನೊಬ್ಬನ ಸಾಧನೆಯಾಗಿತ್ತು. ಆ ದಾಖಲೆ ಮುರಿದಿರುವ ತೇಜಸ್ವಿನ್, ದೇಶಕ್ಕೆ ಚೊಚ್ಚಲ ಪದಕ ತಂದುಕೊಟ್ಟಿದ್ದಾರೆ.

CWG 2022 ಸ್ಕ್ವಾಷ್: ಸೌರವ್ಗೆ ಐತಿಹಾಸಿಕ ಕಂಚು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.