ನವದೆಹಲಿ: ಉದ್ದೀಪನ ಮದ್ದು ಸೇವನೆ ಮಾಡಿದ್ದಕ್ಕಾಗಿ ಗೋವಾ ನ್ಯಾಷನಲ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಸ್ಟೀಪಲ್ ಚೇಸರ್ ಮೊಹಮ್ಮದ್ ನೂರ್ ಹಸನ್ ಮತ್ತು ಭಾರತದ ವರ್ಲ್ಡ್ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ ಹೇಮರಾಜ್ ಗುರ್ಜರ್ ಮತ್ತು ಅಂಜಲಿ ಕುಮಾರಿ ಅವರನ್ನು ತಾತ್ಕಾಲಿಕ ಅಮಾನತುಗೊಳಿಸಲಾಗಿದೆ.

ದೂರ ಓಟಗಾರ ಜಿ. ಲಕ್ಷ್ಮಣನ್ ಮತ್ತು ಸ್ಪ್ರಿಂಟರ್ ಹಿಮಾನಿ ಚಾಂದೆಲ್ ಅವರಿಗೂ ರಾಷ್ಟ್ರೀಯ ಉದ್ದೀಪನ ತಡೆ ಘಟಕವು ಕ್ರಮವಾಗಿ ಎರಡು ಮತ್ತು ನಾಲ್ಕು ವರ್ಷಗಳ ನಿಷೇಧವನ್ನು ವಿಧಿಸಿದೆ.

ಹಸನ್ ಕಳೆದ ವರ್ಷ ಫೆಡರೇಷನ್ ಕಪ್ ಮತ್ತು ರಾಷ್ಟ್ರೀಯ ಓಪನ್ ಚಾಂಪಿಯನ್‌ಷಿಪ್‌ಗಳಲ್ಲಿ 3000 ಮೀಟರ್ ಸ್ಟೀಪಲ್‌ಚೇಸ್ ಚಿನ್ನ ಗೆದ್ದಿದ್ದರು. ಗುರ್ಜರ್ ಅವರು ಜನವರಿಯಲ್ಲಿ ಗಯಾದಲ್ಲಿ ರಾಷ್ಟ್ರೀಯ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಆದರೆ, ಮಾರ್ಚ್‌ನಲ್ಲಿ ಬೆಲ್‌ಗ್ರೇಡ್‌ನಲ್ಲಿ ನಡೆದ ವರ್ಲ್ಡ್ ಕ್ರಾಸ್ ಕಂಟ್ರಿಯಲ್ಲಿ 88ನೇ ಸ್ಥಾನ ಪಡೆದರು. ಅಂಜಲಿ ಕುಮಾರಿ ಜನವರಿಯಲ್ಲಿ ನಡೆದ ರಾಷ್ಟ್ರೀಯ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.