ಚಿಬಾ (ಜಪಾನ್): ಟೋಕಿಯೊ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಲ್ಲಿ ಪದಕ ಗೆಲ್ಲುವಲ್ಲಿ ದೀಪಕ್ ಪುನಿಯಾ ವಿಫಲರಾಗಿದ್ದಾರೆ.

ಗುರುವಾರ ನಡೆದ 86 ಕೆ.ಜಿ ವಿಭಾಗದ ಕಂಚಿನ ಪದಕಕ್ಕಾಗಿ ಹೋರಾಟದಲ್ಲಿ ದೀಪಕ್ ಪುನಿಯಾ ಸೋಲು ಅನುಭವಿಸಿದರು. ಇದರೊಂದಿಗೆ ಭಾರತದ ಮಗದೊಂದು ಪದಕದ ಆಸೆ ಕಮರಿದೆ.

ಇದನ್ನೂ ಓದಿ:Tokyo Olympics: ಕುಸ್ತಿಯಲ್ಲಿ ಹೋರಾಡಿ ಸೋತು ಬೆಳ್ಳಿ ಗೆದ್ದ ರವಿ ದಹಿಯಾ

ಸ್ಯಾನ್ ಮರಿನೋದ ಮೈಲ್ಸ್ ಆಮಿನ್ ವಿರುದ್ಧ ದೀಪಕ್ ದಿಟ್ಟ ಹೋರಾಟವನ್ನೇ ಪ್ರದರ್ಶಿಸಿದ್ದರು. ಅಲ್ಲದೆ ಒಂದು ಹಂತದಲ್ಲಿ 2-1ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಬೌಟ್ ಅಂತ್ಯಗೊಳ್ಳಲು ಇನ್ನೇನು ಕೆಲವೇ ಸೆಕೆಂಡುಗಳಿರುವಾಗ ತಮ್ಮದೇ ತಪ್ಪಿನಿಂದಾಗಿ ಸೋಲಿನ ಆಘಾತ ಎದುರಿಸಬೇಕಾಯಿತು. ಅಂತಿಮವಾಗಿ 2-4ರ ಅಂತರದಲ್ಲಿ ಸೋಲು ಅನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.