ನವದೆಹಲಿ: ವಿವಿಯನ್ ಕಪೂರ್ ಅವರು ಐಎಸ್ಎಸ್ಎಫ್ ವಿಶ್ವ ಕಪ್ ಶೂಟಿಂಗ್ ಫೈನಲ್ನ ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಗುರುವಾರ ಬೆಳ್ಳಿಯ ಪದಕ ಗೆದ್ದುಕೊಂಡರೆ, ಸ್ಕೀಟ್ ಸ್ಪರ್ಧೆಯಲ್ಲಿ ಭಾರತದ ಇನ್ನೊಬ್ಬ ಸ್ಪರ್ಧಿ ಅನಂತ್ ಜೀತ್ ಸಿಂಗ್ ನರೂಕಾ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಫೈನಲ್ನಲ್ಲಿ 44ರ ಸ್ಕೋರ್ನೊಡನೆ ಅವರು ಎರಡನೇ ಸ್ಥಾನ ಪಡೆದರು. ಚೀನಾದ ಯಿಂಗ್ ಖಿ ಚಿನ್ನ ಗೆದ್ದರೆ, ಟರ್ಕಿಯ ತೊಲ್ಗಾ ಎನ್.ಟುನ್ಸರ್ (35) ಅವರು ಕಂಚಿನ ಪದಕ ಜಯಿಸಿದರು.

ಕ್ವಾಲಿಫಿಕೇಷನ್ ಸುತ್ತಿನಲ್ಲಿ ಭಾರತದ ಶೂಟರ್ 125ರಲ್ಲಿ 120 ಸ್ಕೋರ್ನೊಡನೆ ಆರು ಮಂದಿಯಿದ್ದ ಫೈನಲ್ಗೆ ಪ್ರವೇಶ ಪಡೆದಿದ್ದರು.

ಇದಕ್ಕೆ ಮೊದಲು, ರಾಜಸ್ಥಾನದ 26 ವರ್ಷ ವಯಸ್ಸಿನ ನರೂಕಾ ಅವರು ಆರು ಮಂದಿಯ ಫೈನಲ್ನಲ್ಲಿ 43ರ ಸ್ಕೋರ್ನೊಡನೆ ಕಂಚಿನ ಪದಕ ಗೆದ್ದುಕೊಂಡರು. ಇಟಲಿಯ ಟಾಮಾರೊ ಕಾಸಂಡ್ರೊ ಮತ್ತು ಗೇಬ್ರಿಯಲ್ ರೊಸೆಟ್ಟಿ ಅವರು ಕ್ರಮವಾಗಿ 57 ಮತ್ತು 56 ರ ಸ್ಕೋರ್ನೊಡನೆ ಚಿನ್ನ ಮತ್ತು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ನರೂಕಾ ಅವರು ಕ್ವಾಲಿಫಿಕೇಷನ್ ಸುತ್ತಿನಲ್ಲಿ 125ರಲ್ಲಿ 121 ಅಂಕ ಕಲೆಹಾಕಿದ್ದರು.

ಸೋನಮ್ ಮಸ್ಕರ್ ಅವರು ಮಂಗಳವಾರ ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರೆ, ಅಖಿಲ್ ಶಿಯೊರಾಣ್ ಅವರು ಬುಧವಾರ ನಡೆದ ಪುರುಷರ 50 ಮೀ. ರೈಫಲ್ 3 ಪೊಸಿಷನ್ಸ್ನಲ್ಲಿ ಕಂಚಿನ ಪದಕ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.