ನವದೆಹಲಿ: ಎಲೀಟ್ ಈಜುಪಟುಗಳ ತರಬೇತಿಗಾಗಿ ಈಜುಕೊಳಗಳನ್ನು ಮುಕ್ತವಾಗಿಸಬೇಕೆಂದು 100 ಮೀ ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಈಜುಪಟು ಕರ್ನಾಟಕದ ಎಸ್.ಪಿ.ಲಿಖಿತ್ ಶನಿವಾರ ಒತ್ತಾಯಿಸಿದ್ದಾರೆ.

‘ದ ಸ್ಪೋರ್ಟ್ಸ್ ಸ್ಕೂಲ್’ಆಯೋಜಿಸಿದ್ದ ವೆಬಿನಾರ್‌ನಲ್ಲಿ ಈಜುಪಟುಗಳಾದ ಶ್ರೀಹರಿ ನಟರಾಜ್ ಹಾಗೂ ಶಿಖಾ ಟಂಡನ್ ಅವರೊಂದಿಗೆ ಭಾಗವಹಿಸಿದ್ದ ಲಿಖಿತ್ ಈ ಮಾತುಗಳನ್ನಾಡಿದ್ದಾರೆ.

ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳು ಈಗಾಗಲೇ ತರಬೇತಿಗೆ ಅವಕಾಶ ಮಾಡಿಕೊಟ್ಟಿವೆ.ನಾಲ್ಕನೇ ಹಂತದ ಲಾಕ್‌ಡೌನ್ವಿಧಿಸುವ ಸಮಯದಲ್ಲಿ ಭಾರತ ಗೃಹ ಸಚಿವಾಲಯವು ಕ್ರೀಡಾ ಸಂಕೀರ್ಣಗಳು ಹಾಗೂ ಕ್ರೀಡಾಂಗಣಗಳನ್ನು ಅಥ್ಲೀಟುಗಳಿಗೆ ಮುಕ್ತವಾಗಿಸುವುದಾಗಿ ಹೇಳಿತ್ತು. ಆದರೆ ಈಜುಕೊಳಗಳನ್ನು ತೆರೆಯಲು ಅವಕಾಶ ನೀಡಿರಲಿಲ್ಲ.

‘ನಾವು ತರಬೇತಿಗೆ ಮರಳಬೇಕಿದೆ. ಬೇರೆ ದೇಶಗಳಲ್ಲಿ ಹಲವು ಈಜುಪಟುಗಳು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ತರಬೇತಿ ಆರಂಭಿಸಿದ್ದಾರೆ. ಕೋವಿಡ್ ಪಿಡುಗು ಸೃಷ್ಟಿಸಿರುವ ಬಿಕ್ಕಟ್ಟಿನ ಸ್ಥಿತಿಯಲ್ಲೇ ಬದುಕುವುದನ್ನು ಕಲಿಯಬೇಕಿದೆ’ ಎಂದು ಟೋಕಿಯೊ ಒಲಿಂಪಿಕ್ಸ್‌ಗೆ ‘ಬಿ’ ಅರ್ಹತಾ ಸಾಧನೆ ಮಾಡಿರುವ ಲಿಖಿತ್ ನುಡಿದರು.

ಭಾರತ ಈಜು ಫೆಡರೇಷನ್ (ಎಸ್ಎಫ್‌ಐ) ಕೂಡ ಈಜುಕೊಳಗಳನ್ನು ತರಬೇತಿಗೆ ಮುಕ್ತವಾಗಿಸುವಂತೆ ಕ್ರೀಡಾ ಸಚಿವಾಲಯದ ಮೂಲಕ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.