ನವದೆಹಲಿ: ಮುಂದಿನ ತಿಂಗಳು ಇಸ್ತಾನ್‌ಬುಲ್‌ನಲ್ಲಿ ನಡೆಯುವ ಅಂತಿಮ ಒಲಿಂಪಿಕ್ ಅರ್ಹತಾ ಕುಸ್ತಿ ಟೂರ್ನಿಗೆ ಭಾರತ ಕುಸ್ತಿ ಸಂಸ್ಥೆಯು (ಡಬ್ಲ್ಯುಎಫ್‌ಐ) ಸೋಮವಾರ ತಂಡವನ್ನು ಪ್ರಕಟಿಸಿದೆ. ಹೊಸ ಟ್ರಯಲ್ಸ್‌ಗೆ ಸಮಯದ ಕೊರತೆಯುಂದಾಗಿ ಬಿಶ್ಕೆಕ್‌ನಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್‌ನಲ್ಲಿ ಸ್ಪರ್ಧಿಸಿದ ಬಹುತೇಕ ಕುಸ್ತಿಪಟುಗಳನ್ನೇ ಅಂತಿಮಗೊಳಿಸಲಾಗಿದೆ.

ಮೇ 9ರಿಂದ 13ರವರೆಗೆ ಅರ್ಹತಾ ಟೂರ್ನಿ ನಡೆಯಲಿದೆ. 2018ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶಾ ಫೋಗಾಟ್, ಅಂಶು ಮಲಿಕ್ ಮತ್ತು 23 ವರ್ಷದೊಳಗಿನ ವಿಶ್ವ ಚಾಂಪಿಯನ್ ರಿತಿಕಾ ಹೂಡಾ ಅವರನ್ನು ಹೊರತುಪಡಿಸಿ ತಂಡವನ್ನು ಪ್ರಕಟಿಸಲಾಗಿದೆ. ಈ ಮೂವರು ಈಚೆಗೆ ಕಿರ್ಗಿಸ್ತಾನದ ಬಿಶ್ಕೆಕ್‌ನಲ್ಲಿ ನಡೆದ ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಕೋಟಾ ಪಡೆದಿದ್ದಾರೆ.

ಬಿಶ್ಕೆಕ್‌ನಲ್ಲಿ ಭಾರತದ ಪುರುಷರ ತಂಡದ ಕಳಪೆ ಪ್ರದರ್ಶನ ನೀಡಿತ್ತು. ಯಾರಿಗೂ ಒಲಿಂಪಿಕ್ಸ್ ಕೋಟಾ ಲಭಿಸಿರಲಿಲ್ಲ. ಈ ಬಗ್ಗೆ ಭಾರತ ಕುಸ್ತಿ ಸಂಸ್ಥೆ ಅತೃಪ್ತಿ ಹೊಂದಿತ್ತು. ಹೀಗಾಗಿ, ಅಂತಿಮ ಅರ್ಹತಾ ಟೂರ್ನಿಗೆ ಹೊಸ ಟ್ರಯಲ್ಸ್ ನಡೆಯಲು ಯೋಜನೆ ಹಾಕಿಕೊಂಡಿತ್ತು. ಆದರೆ, ಸಮಯಾವಕಾಶದ ಕೊರತೆಯಿಂದಾಗಿ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ ಎಂದು ಡಬ್ಲ್ಯುಎಫ್‌ಐ ಮೂಲಗಳು ತಿಳಿಸಿವೆ.

ಬಿಶ್ಕೆಕ್ ಮತ್ತು ಇಸ್ತಾನ್‌ಬುಲ್ ಟೂರ್ನಿಗಳ ಮಧ್ಯೆ ಕನಿಷ್ಠ ಒಂದು ತಿಂಗಳ ಸಮಯಾವಕಾಶ ಸಿಕ್ಕಿದ್ದರೆ ಅಂತಿಮ ಅರ್ಹತಾ ಟೂರ್ನಿಗೆ ಹೊಸ ಟ್ರಯಲ್ಸ್ ನಡೆಸಬಹುದಿತ್ತು. ಆದರೆ, ಇನ್ನು ಹೆಚ್ಚು ಸಮಯವಿಲ್ಲ. ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುವ ಕುಸ್ತಿಪಟುಗಳಿಗೆ ಇಷ್ಟು ಕಡಿಮೆ ಅವಧಿಯಲ್ಲಿ ತೂಕವನ್ನು ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮೂರು ಕುಸ್ತಿ ಶೈಲಿಗಳ ಆರು ತೂಕ ವಿಭಾಗಗಳಲ್ಲಿ ಒಟ್ಟು 54 ಒಲಿಂಪಿಕ್ಸ್ ಕೋಟಾ ಲಭ್ಯವಿದೆ. ಪ್ರತಿ ಕೆ.ಜಿ ವಿಭಾಗಗಳ ಮೊದಲು ಮೂರು ಸ್ಥಾನ ಪಡೆಯುವ ಸ್ಪರ್ಧಿಗಳಿಗೆ ಒಲಿಂಪಿಕ್ಸ್ ಟಿಕೆಟ್ ಸಿಗಲಿದೆ ಎಂದು ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ತಿಳಿಸಿದೆ.

ಭಾರತ ತಂಡ: ಫ್ರೀಸ್ಟೈಲ್: ಅಮನ್ (57 ಕೆಜಿ), ಸುಜಿತ್ (65 ಕೆಜಿ), ಜೈದೀಪ್ (74 ಕೆಜಿ), ದೀಪಕ್ ಪೂನಿಯಾ (86 ಕೆಜಿ), ದೀಪಕ್ (97 ಕೆಜಿ), ಸುಮಿತ್ (125 ಕೆಜಿ).

ಗ್ರೀಕೊ ರೋಮನ್: ಸುಮಿತ್ (60 ಕೆಜಿ), ಅಶು (67 ಕೆಜಿ), ವಿಕಾಸ್ (77 ಕೆಜಿ), ಸುನಿಲ್ ಕುಮಾರ್ (87 ಕೆಜಿ), ನಿತೇಶ್ (97 ಕೆಜಿ), ನವೀನ್ (130 ಕೆಜಿ).

ಮಹಿಳೆಯರ ಕುಸ್ತಿ: ಮಾನ್ಸಿ (62 ಕೆಜಿ), ನಿಶಾ (68 ಕೆಜಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.