ಬೆಂಗಳೂರು: ಮೈಸೂರಿನ ಯುವ ಗಾಲ್ಫರ್ ಪ್ರಣವಿ ಅರಸ್ ಅವರು ಇಲ್ಲಿ ನಡೆದ ಏಳನೇ ಲೆಗ್ ಮಹಿಳಾ ಗಾಲ್ಫ್ ಟೂರ್ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಇಲ್ಲಿನ ಪ್ರೆಸ್ಟೀಜ್ ಗಾಲ್ಫ್ಶೈರ್ ಅಂಗಣದಲ್ಲಿ 18 ವರ್ಷದ ಆಟಗಾರ್ತಿ, ಟೂರ್ನಿಯ ಕೊನೆಯ ದಿನವಾದ ಶುಕ್ರವಾರ ಸಮೀಪದ ಪ್ರತಿಸ್ಪರ್ಧಿ ಜಾಹ್ನವಿ ಬಕ್ಷಿ ಅವರನ್ನು ಹಿಂದಿಕ್ಕಿದರು.

ಪ್ರಣವಿ ಅವರಿಗೆ ಈ ಋತುವಿನಲ್ಲಿ ಇದು ಮೂರನೇ ಪ್ರಶಸ್ತಿ. ಮೊದಲ ಎರಡು ಲೆಗ್ಗಳಲ್ಲಿ ಅವರಿಗೆ ಪ್ರಶಸ್ತಿ ಒಲಿದಿತ್ತು.

ಟೂರ್ನಿಯಲ್ಲಿ ಅಸ್ಮಿತಾ ಸತೀಶ್ ಎರಡನೇ ಸ್ಥಾನ ಗಳಿಸಿದರೆ, ವಿಧಾತ್ರಿ ಅರಸ್ ಮತ್ತು ಜಾಹ್ನವಿ ಜಂಟಿ ಮೂರನೇ ಸ್ಥಾನ ಗಳಿಸಿದರು. ನೇಹಾ ತ್ರಿಪಾಠಿ ಐದನೇ ಸ್ಥಾನ ಗಳಿಸಿದರು. ಆರನೇ ಸ್ಥಾನವನ್ನು ದುರ್ಗಾ ನಿಟ್ಟೂರ್ ಮತ್ತು ಹೀನಾ ಕಾಂಗ್ ಜಂಟಿಯಾಗಿ ಪಡೆದರು. ಎಂಟನೇ ಲೆಗ್ ಟೂರ್ನಿಯು ಇದೇ 14ರಿಂದ 17ರವರೆಗೆ ಬೆಂಗಳೂರಿನಲ್ಲಿಯೇ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.