ಉಲಾನ್ ಉಡೆ, ರಷ್ಯಾ: ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತಕ್ಕೆ ಭಾನುವಾರ ನಿರಾಸೆ ಕಾಡಿತು. 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಎಲ್.ಸರಿತಾ ದೇವಿ ಅವರು ಸ್ಥಳೀಯ ಪಟು ನತಾಲಿಯಾ ಶರ್ಡಿನಾ ಎದುರು 0–5ರಿಂದ ಮಣಿದರು.

ನಾಲ್ಕನೇ ಶ್ರೇಯಾಂಕದ ಭಾರತದ ತಾರೆಗೆ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿತ್ತು.ಸರಿತಾ 2006ರಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದರು. ಆಗಿನಿಂದ ಅವರಿಗೆ ವಿಶ್ವ ಚಾಂಪಿಯನ್ಷಿಪ್ನಲ್ಲಿ ಪದಕ ಒಲಿದಿಲ್ಲ.

81 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ನಂದಿನಿ ಅವರು ಜರ್ಮನಿಯ ಐರಿನಾ ನಿಕೊಲೆಟ್ಟಾ ಸ್ಕಾನ್ಬರ್ಗರ್ ಅವರಿಗೆ ಸಾಟಿಯಾಗಲೇ ಇಲ್ಲ. ಅವರು ಕೂಡ 0–5ರಿಂದ ಸೋತರು.

ನಂದಿನಿ ಅವರು ತಾಂತ್ರಿಕವಾಗಿ ಬಲಿಷ್ಠರಾಗಿದ್ದ ಶಾನ್ಬರ್ಗರ್ ವಿರುದ್ಧ ಪರದಾಡಿದರು.ಸವೀತಿ ಬೂರಾ (75 ಕೆಜಿ ವಿಭಾಗ) ಹಾಗೂ ಜಮುನಾ ಬೋರಾ (54 ಕೆಜಿ ವಿಭಾಗ) ಈಗಾಗಲೇ ಪ್ರಿಕ್ವಾರ್ಟರ್ಫೈನಲ್ ತಲುಪಿದ್ದು, ಪದಕದ ಭರವಸೆಯಾಗಿ ಉಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.