ಸಿಟ್‌ಜಸ್, ಸ್ಪೇನ್: ಸತತ ಎರಡು ಸುತ್ತುಗಳಲ್ಲಿ ಗೆಲುವಿನ ಸಿಹಿ ಉಂಡಿದ್ದ ಭಾರತ ತಂಡವು ವಿಶ್ವ ಮಹಿಳೆಯರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ರಷ್ಯಾ ಎದುರು ಮಂಗಳವಾರ ನಿರಾಸೆ ಅನುಭವಿಸಿತು.

‘ಎ’ ಗುಂಪಿನ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು 1–3ರಿಂದ ರಷ್ಯಾ ಎದುರು ಸೋತರು. ಆದರೆ ಈಗಾಗಲೇ ಕ್ವಾರ್ಟರ್‌ಫೈನಲ್ ತಲುಪಿರುವ ಭಾರತ ತಂಡವು ಪ್ರಿಲಿಮನರಿ ಹಂತದ ಐದನೇ ಸುತ್ತಿನಲ್ಲಿ ಫ್ರಾನ್ಸ್ ಎದುರು ಆಡಲಿದೆ.

ರಷ್ಯಾ ಎದುರಿನ ಸೆಣಸಾಟದಲ್ಲಿ ಭಾರತದ ದ್ರೋಣವಳ್ಳಿ ಹಾರಿಕಾ ಮತ್ತು ಮೇರಿ ಆ್ಯನಾ ಗೋಮ್ಸ್ ಅವರು ಕ್ರಮವಾಗಿ ಅಲೆಕ್ಸಾಂಡ್ರಾ ಗೋರಿಚ್‌ಕಿನಾ ಹಾಗೂ ಪೊಲಿನಾ ಶುವಲೊವಾ ಎದುರು ಡ್ರಾ ಸಾಧಿಸಿದರು. ಆದರೆ ತಾನಿಯಾ ಸಚ್‌ದೇವ್ ಮತ್ತು ಆರ್. ವೈಶಾಲಿ ಸೋಲು ಅನುಭವಿಸಿದರು.

ಇದಕ್ಕೂ ಮೊದಲು ಭಾರತ ತಂಡವು ಬಲಿಷ್ಠ ಆರ್ಮೇನಿಯಾ ಎದುರು 2.5–1.5ರಿಂದ ಗೆದ್ದಿದ್ದರೆ, ಸ್ಪೇನ್ ತಂಡವನ್ನು 2.5-1.5ರಿಂದ ಸೋಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.