ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಸ್ತಿ ಚಾಂಪಿಯನ್‌ಷಿಪ್‌: ರೋನಕ್‌ಗೆ ಕಂಚಿನ ಪದಕ

Published 22 ಆಗಸ್ಟ್ 2024, 0:53 IST
Last Updated 22 ಆಗಸ್ಟ್ 2024, 0:53 IST
ಅಕ್ಷರ ಗಾತ್ರ

ಅಮ್ಮಾನ್ (ಜೋರ್ಡಾನ್‌): ಭಾರತದ ರೋನಕ್ ದಹಿಯಾ ಅವರು ವಿಶ್ವ 17 ವರ್ಷದೊಳಗಿನವರ ಕುಸ್ತಿ ಚಾಂಪಿಯನ್‌ಷಿಪ್‌ನ 110 ಕೆ.ಜಿ. ಗ್ರೀಕೊ ರೋಮನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಕಂಚಿನ ಪದಕಕ್ಕೆ ಮಂಗಳವಾರ ನಡೆದ ಸೆಣಸಾಟದಲ್ಲಿ ಅವರು ಟರ್ಕಿಯ ಇಮ್ರುಲ್ಲಾ ಕ್ಯಾಪ್ಕಾನ್ ಅವರ ಸವಾಲನ್ನು 6–1 ರಿಂದ ಸುಲಭವಾಗಿ ಬದಿಗೊತ್ತಿದರು. ರೋನಕ್ ಅವರು ವಿಶ್ವ ಕ್ರಮಾಂಕದ ತಮ್ಮ ವಯೋವರ್ಗದಲ್ಲಿ ಎರಡನೇ ರ್‍ಯಾಂಕ್ ಹೊಂದಿದ್ದಾರೆ.

ಇದಕ್ಕೆ ಮೊದಲು ಸೆಮಿಫೈನಲ್‌ನಲ್ಲಿ ರೋನಕ್ ಅವರು ಹಂಗೆರಿಯ ಝೊಲ್ಟಾನ್ ಝೇಕೊ ಅವರಿಗೆ ಮಣಿದಿದ್ದರು. ಝೇಕೊ ಅಂತಿಮವಾಗಿ ಬೆಳ್ಳಿ ಪದಕ ಗೆದ್ದರು. ಈ ವಿಭಾಗದಲ್ಲಿ ಚಿನ್ನ ಉಕ್ರೇನ್‌ನ ಇವಾನ್‌ ಯಂಕೋವ್‌ಸ್ಕಿ ಅವರ ಪಾಲಾಯಿತು. ಯಂಕೋವ್‌ಸ್ಕಿ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ 13–4 ರಿಂದ ಝೊಲ್ಟಾನ್ ಅವರನ್ನು ಸೋಲಿಸಿದ್ದರು.

ನಾಲ್ವರು ಫೈನಲ್‌ಗೆ: ಮಹಿಳೆಯರ ವಿಭಾಗದಲ್ಲಿ ಅದಿತಿ ಕುಮಾರಿ (43 ಕೆಜಿ), ನೇಹಾ (57 ಕೆಜಿ), ಪುಲ್ಕಿತ್ (65ಕೆಜಿ) ಮತ್ತು ಮಾನ್ಸಿ ಲಾಥರ್ (73ಕೆಜಿ) ಅವರು ಪ್ರಬಲ ಪ್ರದರ್ಶನ ನೀಡಿ ಫೈನಲ್‌ಗೆ ಲಗ್ಗೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT