ಬೆಂಗಳೂರು: ಕರ್ನಾಟಕದ ಯಶಸ್ವಿನಿ ಘೋರ್ಪಡೆ ಅವರು ಕತಾರ್ನ ದೋಹಾದಲ್ಲಿ ನಡೆದ ಡಬ್ಲ್ಯುಟಿಟಿ ಫೀಟರ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಮಹಿಳೆಯರ ಸಿಂಗಲ್ಸ್ನ ಫೈನಲ್ನಲ್ಲಿ 19 ವರ್ಷ ವಯಸ್ಸಿನ ಯಶಸ್ವಿನಿ 9-11, 11-7, 8-11, 7-11ರಿಂದ ಜಪಾನ್ನ ಹಿಟೊಮಿ ಸಾಟೊ ಅವರಿಗೆ ಶರಣಾದರು.
ಇದಕ್ಕೂ ಮೊದಲು ಸೆಮಿಫೈನಲ್ನಲ್ಲಿ 11-7, 11-8, 13-11ರಿಂದ ಜಪಾನ್ನ ಸಾಕಿ ಶಿಬಾಟಾ ಅವರನ್ನು; ಕ್ವಾರ್ಟರ್ ಫೈನಲ್ನಲ್ಲಿ 5-11, 11-7, 11-8, 8-11, 11-6ರಿಂದ ಅದೇ ದೇಶದ ಹರುನಾ ಓಜಿಯೊ ಅವರನ್ನು ಹಿಮ್ಮೆಟ್ಟಿಸಿದ್ದರು.