ನವದೆಹಲಿ: ಅಮೋಘ ಆಟವಾಡಿದ ಭಾರತದ ರಿಧಮ್ ಅವರು ಸ್ಪೇನ್‌ನ ಲಾ ನೂಸಿಯಾದಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಎಂಟರಘಟ್ಟ ತಲುಪಿದರು. ಭಾರತದ ಇತರ ನಾಲ್ವರು ಬಾಕ್ಸರ್‌ಗಳು ಪ್ರೀಕ್ವಾರ್ಟರ್‌ಫೈನಲ್ ತಲುಪಿದರು.

92+ ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ರಿಧಮ್ ಪ್ರೀಕ್ವಾರ್ಟರ್‌ಫೈನಲ್ ಬೌಟ್‌ನಲ್ಲಿ ಲಾತ್ವಿಯಾದ ಮಿಕ್ಸ್ ಬೆರ್ಜಿನ್ಸ್ ಎದುರು ಆಕ್ರಮಣಕಾರಿ ನಡೆಗಳ ಮೂಲಕ ಗಮನಸೆಳೆದರು. ಅವರ ಸತತ ಪಂಚ್‌ಗಳಿಗೆ ಲಾತ್ವಿಯಾ ಆಟಗಾರ ತತ್ತರಿಸಿದರು. ಆರ್‌ಎಸ್‌ಸಿ (ರೆಫರಿಯಿಂದ ಸ್ಪರ್ಧೆ ಸ್ಥಗಿತ) ಆಧಾರದಲ್ಲಿ ರಿಧಮ್ ಗೆಲುವಿನ ನಗೆ ಬೀರಿದರು.

ಜಾದೂಮಣಿ ಸಿಂಗ್ ಮಂದೆಂಗಬಮ್ (51 ಕೆಜಿ), ಭರತ್ ಜೂನ್ (92 ಕೆಜಿ)32ರ ಘಟ್ಟದ ಬೌಟ್‌ಗಳಲ್ಲಿ ಗೆದ್ದು ಪ್ರೀಕ್ವಾರ್ಟರ್‌ಫೈನಲ್ ತಲುಪಿದರು. ಜಾದೂಮಣಿ 5–0ಯಿಂದ ಅಜರ್‌ಬೈಜಾನ್‌ನ ಅಮಿನ್ ಮಮ್ಮದ್‌ಜದಾ ಎದುರು, ಭರತ್ ಇದೇ ಅಂತರದಲ್ಲಿ ಸ್ಪೇನ್‌ನ ರುಬೆನ್ ಇಬಾನೆಜ್ ಅವರನ್ನು ಸೋಲಿಸಿದರು.

ವಂಶಜ್ (63.5 ಕೆಜಿ) ಮತ್ತು ಅಮನ್ ರಾಥೋಡ್ (67 ಕೆಜಿ) ಕೂಡ 16ರ ಘಟ್ಟಕ್ಕೆ ಲಗ್ಗೆಯಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.