ಒಡೆನ್ಸ್, ಡೆನ್ಮಾರ್ಕ್: ಪ್ರಯಾಸದ ಗೆಲುವಿನ ಮೂಲಕ ಭಾರತದ ಸೈನಾ ನೆಹ್ವಾಲ್, ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದರು. ಆದರೆ ಭರವಸೆ ಮೂಡಿಸಿದ್ದ ಪಿ.ವಿ.ಸಿಂಧು ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.

ಮಂಗಳವಾರ ನಡೆದ ಜಿದ್ದಾಜಿದ್ದಿಯ ಹಣಾಹಣಿಯಲ್ಲಿ ಸೈನಾ, ಹಾಂಕಾಂಗ್ನ ಗ್ನಾನ್ ಯಿ ಚಾಂಗ್ ಎದುರು 20–22, 21–17, 24–22ರಿಂದ ಗೆದ್ದರು.

ಅಂತಿಮ ಕ್ಷಣದವರೆಗೂ ರೋಮಾಂಚಕಾರಿಯಾಗಿದ್ದ ಪಂದ್ಯದ ಮೊದಲ ಗೇಮ್ನಲ್ಲಿ ಉತ್ತಮ ಹೋರಾಟ ನಡೆಸಿದ ಸೈನಾ ಕೊನೆಯಲ್ಲಿ ಸೋತರು. ಆದರೆ ಎರಡನೇ ಗೇಮ್ನಲ್ಲಿ ತಿರುಗೇಟು ನೀಡಿ, ಪಂದ್ಯವನ್ನು ರೋಚಕ ಘಟ್ಟದತ್ತ ಕೊಂಡೊಯ್ದರು. ಅಂತಿಮ ಗೇಮ್ನಲ್ಲಿ ಉಭಯ ಆಟಗಾರ್ತಿಯರು ಕೂಡ ಪ್ರಬಲ ಪೈಪೋಟಿ ನಡೆಸಿದರು. ಕೊನೆಗೆ ಸೈನಾ ಗೆಲುವು ತಮ್ಮದಾಗಿಸಿಕೊಂಡರು.

ಸಿಂಧುಗೆ ಸೋಲು: ಅಮೆರಿಕದ ಬಿವೆನ್ ಜಾಂಗ್ಗೆ ಸಿಂಧು ಮಣಿದರು. ಮೊದಲ ಗೇಮ್ನಲ್ಲಿ 17–21ರಿಂದ ಸೋತ ಸಿಂಧು 21–16ರಿಂದ ಎರಡನೇ ಗೇಮ್ ತಮ್ಮದಾಗಿಸಿಕೊಂಡರು. ಆದರೆ ನಿರ್ಣಾಯಕ ಮೂರನೇ ಗೇಮ್ನಲ್ಲಿ ಜಾಂಗ್ ತಿರುಗೇಟು ನೀಡಿ ಪಂದ್ಯ ಗೆದ್ದರು. ಜಾಂಗ್ ವಿರುದ್ಧ ಸಿಂಧು ಅವರಿಗೆ ಇದು ನಿರಂತರ ಮೂರನೇ ಸೋಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.