ಇಂಫಾಲ: ಒಲಿಂಪಿಕ್ಸ್ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದು ತವರಿಗೆ ಮರಳಿದ ಮೀರಾಬಾಯಿ ಚಾನು ಹೆತ್ತ ತಾಯಿಯ ಬಳಿ ಮಗುವಾದರು. ಮಂಗಳವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಅಮ್ಮ ಒಂಗ್ಬಿ ತೊಂಬಿ ಲೀಮಾ ಮತ್ತು ತಂದೆ ಕೃತಿ ಮೇತಿ ಅವರನ್ನು ಭೇಟಿಯಾದಾಗ ಮೀರಾ ಆನಂದಬಾಷ್ಪ ಸುರಿಸಿ ಭಾವುಕರಾದರು.

ವಿಮಾನನಿಲ್ದಾಣದಲ್ಲಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರಿಂದ ಸನ್ಮಾನ ಸ್ವೀಕರಿಸಿದ ನಂತರ ಮೀರಾಬಾಯಿ ಪಾಲಕರನ್ನು ಭೇಟಿಯಾದರು.

ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲರಾದ ನಂತರ ಕಠಿಣ ಅಭ್ಯಾಸ ಮತ್ತು ತರಬೇತಿಯಲ್ಲಿ ಪಾಲ್ಗೊಂಡಿದ್ದ ಮೀರಾ ತವರಿಗೆ ಬಂದದ್ದು ಅಪರೂಪ. ಹೀಗಾಗಿ ಹೆತ್ತವರನ್ನು ಕಂಡಾಗ ಹೆಚ್ಚು ಭಾವುಕರಾದರು. ಸರ್ಕಾರದ ಗೌರವ ಸ್ವೀಕರಿಸಿದ ಅವರಿಗೆ ₹ ಒಂದು ಕೋಟಿ ಮೊತ್ತದ ಚೆಕ್ ಹಸ್ತಾಂತರಿಸಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಹುದ್ದೆಯ ನೇಮಕಾತಿ ಪತ್ರವನ್ನೂ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.