ಬೆಂಗಳೂರು: ಬಾಲಕರ ವಿಭಾಗದಲ್ಲಿ ಉಳಿದಿದ್ದ ಏಕೈಕ ಶ್ರೇಯಾಂಕಿತ ಆಟಗಾರನ ವಿರುದ್ಧ ಭರ್ಜರಿ ಜಯ ಗಳಿಸಿದ ಆಕಾಶ್ ಗಾಂವ್ಕರ್ ಇಲ್ಲಿನ ಟಾಪ್‌ಸ್ಪಿನ್ ಟೆನಿಸ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಎಐಟಿಎ 18 ವರ್ಷದೊಳಗಿನವರ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸಿದರು.

ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಆಕಾಶ್ 6-4, 5-7, 6-2ರಲ್ಲಿ ಸ್ಕಂದ ಪ್ರಸನ್ನ ರಾವ್ ವಿರುದ್ಧ ಜಯ ಗಳಿಸಿದರು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ರೆತಿನ್ ಪ್ರಣವ್6-2, 3-6, 6-2ರಲ್ಲಿ ಅದಿತ್ ಅಮರನಾಥ್ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಿದರು.

ಬಾಲಕಿಯರ ವಿಭಾಗದಲ್ಲಿ ಐದನೇ ಶ್ರೇಯಾಂಕದ ಸಾನ್ಯಾ ಮಸಂದ್ ಟೂರ್ನಿಯಲ್ಲಿ ಪ್ರಬಲ ಎದುರಾಳಿಗಳನ್ನು ಮಣಿಸುತ್ತ ಬಂದಿದ್ದ ಸೌಮ್ಯಾ ರೋಂಡೆ ವಿರುದ್ಧ 6-1, 6-7 (5), 7-6 (8)ರಲ್ಲಿ ಗೆಲುವು ದಾಖಲಿಸಿದರು. ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದಿದ್ದ ಸೌಮ್ಯಾ ಸುಲಭವಾಗಿ ಪಂದ್ಯವನ್ನು ಬಿಟ್ಟುಕೊಡಲಿಲ್ಲ. ಹೀಗಾಗಿ ಅಂಗಣ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು.

ನಾಲ್ಕರ ಘಟ್ಟದ ಮತ್ತೊಂದು ಪೈಪೋಟಿಯಲ್ಲಿ ಎರಡನೇ ಶ್ರೇಯಾಂಕದ ಸಮೀಕ್ಷಾ ದಬಾಸ್ 6-1, 3-6, 7-6 (4)ರಲ್ಲಿ ಆತ್ಮೀಕಾ ಚೈತನ್ಯ ಅವರನ್ನು ಮಣಿಸಿ ಫೈನಲ್ ತಲುಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.