ನ್ಯೂಯಾರ್ಕ್: ಬೆಲಾರಸ್‌ನ 26 ವರ್ಷದ ಅರಿನಾ ಸಬಲೆಂಕಾ ಅವರು ಅಮೆರಿಕಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಮೂರನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ್ತಿ ಅರಿನಾ ಸಬಲೆಂಕಾ ಅವರು ಆರನೇ ಶ್ರೇಯಾಂಕದ ಆತಿಥೇಯ ದೇಶದ ಜೆಸ್ಸಿಕಾ ಪೆಗುಲಾ ಅವರನ್ನು 7-5, 7-5 ಸೆಟ್‌ಗಳಿಂದ ಹಿಮ್ಮೆಟ್ಟಿಸಿದ್ದಾರೆ.

2023 ಮತ್ತು 2024ರ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆಗಿರುವ ಸಬಲೆಂಕಾ ಅವರು ಮೂರನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವರ್ಷದ ರನ್ನರ್ ಅಪ್ ಆಗಿದ್ದ ಸಬಲೆಂಕಾ ಅವರು ಸೆಮಿಫೈನಲ್‌ನಲ್ಲಿ 13ನೇ ಶ್ರೇಯಾಂಕದ ಎಮ್ಮಾ ನವಾರೊ (ಅಮೆರಿಕ) ಅವರನ್ನು 6-3, 7-6 (2) ಸೆಟ್‌ಗಳಿಂದ ಸೋಲಿಸಿದ್ದರು.

ಆರು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿ ನಿರಾಸೆ ಅನುಭವಿಸಿದ್ದ 30 ವರ್ಷ ವಯಸ್ಸಿನ ಪೆಗುಲಾ ಇದೇ ಮೊದಲ ಬಾರಿ ನಾಲ್ಕರ ಘಟ್ಟ ಪ್ರವೇಶಿಸಿದ್ದರು. ಈ ಹಾದಿಯಲ್ಲಿ ಅವರು ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್ ಅವರಿಗೆ ನೇರ ಸೆಟ್‌ಗಳಿಂದ ಆಘಾತ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.