ಬೆಂಗಳೂರು: ಭರವಸೆಯ ಆಟಗಾರ ಸಾಕೇತ್ ಮೈನೇನಿ ಅವರು ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಗಿಟ್ಟಿಸಿದ್ದಾರೆ.

‘ಭಾರತದ ಟೆನಿಸ್ನಲ್ಲಿ ಸಾಕೇತ್ ಪ್ರತಿಭಾವಂತ ಆಟಗಾರನಾಗಿದ್ದಾರೆ. ಉತ್ತಮ ರ್ಯಾಂಕಿಂಗ್ ಹೊಂದಿರುವ ಅವರು ಇಲ್ಲಿ ಆಡುತ್ತಿದ್ದಾರೆ. ಶರವೇಗದ ಸರ್ವ್ಗಳಿಗೆ ಹೆಸರುವಾಸಿಯಾಗಿರುವ ಸಾಕೇತ್ ಅವರ ಆಟವನ್ನು ನೋಡುವ ಅವಕಾಶ ಇಲ್ಲಿಯವರಿಗೆ ಸಿಗಲಿದೆ’ ಎಂದು ಟೂರ್ನಿ ನಿರ್ದೇಶಕ ಸುನಿಲ್ ಯಜಮಾನ್ ತಿಳಿಸಿದ್ದಾರೆ.

ಹಾಲಿ ಚಾಂಪಿಯನ್ ಸುಮಿತ್ ನಗಾಲ್, 2017ರಲ್ಲಿ ರಾಷ್ಟ್ರೀಯ ರನ್ನರ್ ಅಪ್ ಸೂರಜ್ ಪ್ರಬೋಧ್ ಮತ್ತು ಸ್ಥಳೀಯ ಆಟಗಾರ ಆದಿಲ್ ಕಲ್ಯಾಣಪುರ್ ಅವರು ಈಗಾಗಲೇ ವೈಲ್ಡ್ಕಾರ್ಡ್ ಪಡೆದಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.