ನ್ಯೂಯಾರ್ಕ್: ಭಾರತದ ಡಬಲ್ಸ್ ಆಟಗಾರರು ಅಮೆರಿಕ ಓಪನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಡೇವಿಸ್ ಕಪ್ ಆಟಗಾರ ಎನ್.ಶ್ರೀರಾಮ್ ಬಾಲಾಜಿ ಮತ್ತು ಯುಕಿ ಭಾಂಬ್ರಿ ಅವರು ತಮ್ಮ ತಮ್ಮ ಜೊತೆಗಾರರೊಡನೆ ಡಬಲ್ಸ್‌ನಲ್ಲಿ ಮೊದಲ ಸುತ್ತಿನ ಪಂದ್ಯಗಳನ್ನು ಗೆದ್ದುಕೊಂಡರು.

ಬಾಲಾಜಿ ಅವರು ಅರ್ಜೆಂಟೀನಾದ ಜೊತೆಗಾರ ಗಿದೊ ಅಂಡ್ರಿಯೋಜಿ ಅವರೊಂದಿಗೆ ಆರಂಭದ ಹಿನ್ನಡೆಯಿಂದ ಚೇತರಿಸಿ 5–7, 6–1, 7–6 (12–6) ರಿಂದ ನ್ಯೂಜಿಲೆಂಡ್ ಮಾರ್ಕಸ್ ಡೇನಿಯಲ್ ಮತ್ತು ಮೆಕ್ಸಿಕೊದ ಮಿಗೆಲ್ ರಯೆಸ್ ವೆರೆಲಾ ಜೋಡಿಯ ಮೇಲೆ ಜಯಗಳಿಸಿದರು. ತೀವ್ರ ಪೈಪೋಟಿಯ ಈ ಪಂದ್ಯ 2 ಗಂಟೆ 36 ನಿಮಿಷಗಳವರೆಗೆ ಬೆಳೆಯಿತು.

ಬಾಲಾಜಿ ಫ್ರೆಂಚ್ ಓಪನ್‌ನಲ್ಲೂ ಗಮನ ಸೆಳೆದಿದ್ದರು. ಅಲ್ಲಿನ ಕ್ಲೇ ಅಂಕಣದಲ್ಲಿ ಬಾಲಾಜಿ– ರೆಯೆಸ್ ಜೋಡಿ, ಅನುಭವಿಗಳಾದ ರೋಹನ್ ಬೋಪಣ್ಣ– ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರಿಗೆ ತೀವ್ರ ಪೈಪೋಟಿ ನೀಡಿತ್ತು.

ಇಲ್ಲಿ ಯಶಸ್ಸಿನ ಓಟ ಮುಂದುವರಿಸಿದರೆ, ಅದು ಬಾಲಾಜಿ ಅವರಿಗೆ ಸ್ವೀಡನ್ ವಿರುದ್ಧ ಡೇವಿಸ್ ಕಪ್‌ಗೆ ಉತ್ತಮ ತಯಾರಿ ಎನಿಸಲಿದೆ. ಅವರು ಡೇವಿಸ್ ಕಪ್‌ನಲ್ಲಿ ಡಬಲ್ಸ್ ಆಡಲಿದ್ದಾರೆ.

ಯುಕಿ ಭಾಂಬ್ರಿ ಅವರು ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ಟಿ ಜೊತೆಗೂಡಿ 6–3, 6–4 ರಿಂದ ಸ್ಥಳೀಯರಾದ ರಯಾನ್ ಸೆಗೆರ್‌ಮನ್– ಪ್ಯಾಟ್ರಿಕ್ ಟ್ರಹಾಕ್ ಅವರನ್ನು ಸೋಲಿಸಿದರು. ರಯಾನ್– ಪ್ಯಾಟ್ರಿಕ್ ಅವರು ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.