ಬೆಂಗಳೂರು: ಭಾರತದ ಸಾಕೇತ್ ಮೈನೇನಿ ಮತ್ತು ರಾಮಕುಮಾರ್ ರಾಮನಾಥನ್ ಜೋಡಿ ಫ್ರಾನ್ಸ್ನ ಕಾನ್ಸ್ಟಾಂಟಿನ್ ಕೌಜ್ಮೈನ್ ಮತ್ತು ಮ್ಯಾಕ್ಸಿಮ್ ಜಾನ್ವಿಯರ್ ಅವರನ್ನು ಸೋಲಿಸಿ ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿತು. ಆದರೆ ಭಾರತದ ಅಗ್ರಗಣ್ಯ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಅಭಿಯಾನ ಸೆಮಿಫೈನಲ್ನಲ್ಲಿ ಕೊನೆಗೊಂಡಿತು.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಂಗಣದಲ್ಲಿ ನಡೆದ ಡಬಲ್ಸ್ ಫೈನಲ್ನಲ್ಲಿ ಉತ್ತಮ ಆಟ ಪ್ರದರ್ಶಿಸಿದ ಮೈನೇನಿ– ರಾಮಕುಮಾರ್ 6-3, 6-4 ರಿಂದ ಗೆದ್ದು ಕಿರೀಟ ಮುಡಿಗೇರಿಸಿಕೊಂಡರು. ಕಾನ್ಸ್ಟಾಂಟಿನ್– ಮ್ಯಾಕ್ಸಿಮ್ ರನ್ನರ್ಸ್ ಅಪ್ ಆದರು.

ನಾಲ್ಕರ ಘಟ್ಟದ ಪಂದ್ಯದಲ್ಲಿ ಇಟಲಿಯ ಸ್ಟಿಫಾನೊ ನೆಪೋಲಿಟಾನೊ 7–6 (2), 6–4ರಿಂದ ನಗಾಲ್ ಅವರನ್ನು ಸೋಲಿಸಿದರು. ಏಳನೇ ಶ್ರೇಯಾಂಕದ ಸ್ಟಿಫಾನೊ ಭಾನುವಾರ ನಡೆಯಲಿರುವ ಫೈನಲ್ನಲ್ಲಿ ಒಂಬತ್ತನೇ ಶ್ರೇಯಾಂಕದ ದಕ್ಷಿಣ ಕೊರಿಯಾ ಆಟಗಾರ ಸಿಯಾಂಗ್ಚಾನ್ ಹಾಂಗ್ ವಿರುದ್ಧ ಆಡುವರು. 26 ವರ್ಷದ ನಗಾಲ್ ಮೊದಲ ಸೆಟ್ನಲ್ಲಿ 4–1ರ ಆರಂಭಿಕ ಮುನ್ನಡೆ ಗಳಿಸಿದರು. ಈ ಹಂತದಲ್ಲಿ ಇಟಲಿ ಆಟಗಾರ ತಿರುಗೇಟು ನೀಡಲು ಆರಂಭಿಸಿದರು. ಅವರ ನಿಖರವಾದ ಸರ್ವ್ಗಳನ್ನು ಆಡಿದ ಅವರು ಒಂದೆರಡು ಬ್ರೇಕ್ ಪಾಯಿಂಟ್ ಕೂಡ ಉಳಿಸಿಕೊಂಡರು. ಇಬ್ಬರ ನಡುವೆಯೂ ತುರುಸಿನ ಪೈಪೋಟಿ ಕಂಡ ಈ ಸೆಟ್ ಟೈಬ್ರೇಕರ್ಗೆ ಹೋಯಿತು.ಕೆಲವು ತಪ್ಪುಗಳನ್ನು ಮಾಡಿದ ನಗಾಲ್ ಹಿನ್ನಡೆ ಅನುಭವಿಸಿರು. ತಮಗೆ ಸಿಕ್ಕ ಅವಕಾಶಗಳನ್ನು ಸ್ಟಿಫಾನೊ ಸಮರ್ಥವಾಗಿ ಬಳಸಿಕೊಂಡರು.

ಇದೇ ವೇಳೆ ನಗಾಲ್ ಅವರನ್ನು ಕೆಎಸ್ಎಲ್ಟಿಎ ಹಿರಿಯ ಉಪಾಧ್ಯಕ್ಷರೂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ₹5 ಲಕ್ಷ ನಗದು ನೀಡಿ ಸನ್ಮಾನಿಸಿದರು. ಕಾರ್ಯದರ್ಶಿ ಮಹೇಶ್ವರ್ ರಾವ್, ಟೂರ್ನಿ ನಿರ್ದೇಶಕ ಸುನಿಲ್ ಯಜಮಾನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.