ಪುಣೆ: ನಿರ್ಣಾಯಕ ಸೆಟ್‌ನಲ್ಲಿ ಪಾಯಿಂಟ್ಸ್ ಕೈಚೆಲ್ಲಿದ ಭಾರತದ ರಾಮ್‌ಕುಮಾರ್ ರಾಮನಾಥನ್ ಅವರು ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್ ಟೂರ್ನಿಯಲ್ಲಿ ಸೋಲು ಅನುಭವಿಸಿದರು.

ಇಲ್ಲಿ ನಡೆಯುತ್ತಿರುವ ಟೂರ್ನಿಯ ಮಂಗಳವಾರ ರಾಮ್‌ಕುಮಾರ್ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ 6–3, 5–7, 3–6ರಿಂದ ಸ್ಪೇನ್‌ನ ಪೆಡ್ರೊ ಮಾರ್ಟಿನೆಜ್ ಎದುರು ಮುಗ್ಗರಿಸಿದರು.

ಎರಡು ತಾಸು 28 ನಿಮಿಷಗಳ ಹಣಾಹಣಿಯ ಆರಂಭದಲ್ಲಿ ರಾಮ್‌ಕುಮಾರ್ ಮೇಲುಗೈ ಸಾಧಿಸಿದರು. ಆದರೆ ವಿಶ್ವ ರ‍್ಯಾಂಕಿಂಗ್‌ನಲ್ಲಿ 62ನೇ ಸ್ಥಾನದಲ್ಲಿರುವ ಪೆಡ್ರೊ ಬಳಿಕ ಮೇಲುಗೈ ಸಾಧಿಸಿದರು.

ಪೆಡ್ರೊ ಅವರ ಆಕರ್ಷಕ ಸರ್ವ್‌ಗಳಿಗೆ ಪ್ರತ್ಯುತ್ತರ ನೀಡುವಲ್ಲಿ ರಾಮ್‌ಕುಮಾರ್ ಅವರಿಗೆ ಸಾಧ್ಯವಾಗಲಿಲ್ಲ. ಫೋರ್‌ಹ್ಯಾಂಡ್ ಹೊಡೆತಗಳಲ್ಲಿ ಸ್ಪೇನ್ ಆಟಗಾರ ಪಾರಮ್ಯ ಮೆರೆದರು.

ರಾಮ್‌ಕುಮಾರ್ ಅವರ ಸೋಲಿನೊಂದಿಗೆ ಭಾರತದ ಮೂವರು ಆಟಗಾರರು ಪ್ರಧಾನ ಸುತ್ತಿನಿಂದ ಹೊರಬಿದ್ದಂತಾಗಿದೆ.

ಮಾನಸ್ ಧಾಮನೆ, ಸುಮಿತ್ ನಗಾಲ್ ಸೋಮವಾರ ಸೋಲು ಕಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.