ಬೆಂಗಳೂರು: ಕೋಕಾ ಕೋಲಾ ಇಂಡಿಯಾ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, ವಿಶ್ವಕಪ್ನಲ್ಲಿ ಭಾಗವಹಿಸಿರುವ 10 ದೇಶಗಳ ಧ್ವಜಗಳನ್ನು ಮತ್ತು ಐಸಿಸಿಯ ಏಕತಾ ಧ್ವಜವನ್ನು ಮರುಬಳಕೆ ಮಾಡಿದ ಪೆಟ್ ಬಾಟಲುಗಳಿಂದ ತಯಾರಿಸಿದೆ. ಈ ಧ್ವಜಗಳನ್ನು ಪಂದ್ಯಗಳು ನಡೆಯುವ ಕ್ರೀಡಾಂಗಣದಲ್ಲಿ ಉದ್ಘಾಟನೆಯ ವೇಳೆ ಪ್ರದರ್ಶಿಸುತ್ತ ಬರಲಾಗಿದೆ.

ಪರಿಸರ ರಕ್ಷಣೆಯ ಜವಾಬ್ದಾರಿಯ ಭಾಗವಾಗಿ ಈ ಉಪಕ್ರಮಕ್ಕೆ ಕೋಕಾಕೋಲಾ ಮತ್ತು ಐಸಿಸಿ ಮುಂದಾಗಿದೆ. ಬಳಕೆ ಮಾಡಿದ ಪೆಟ್ ಬಾಟಲುಗಳಿಂದ ನೂಲನ್ನು ಉತ್ಪಾದಿಸಿ ಈ ಧ್ವಜಗಳನ್ನು ತಯಾರಿಸಲಾಗಿದೆ. ವಿಶ್ವಕಪ್ ಪಂದ್ಯಗಳು ನಡೆಯುವ ಪ್ರತಿ ಕ್ರೀಡಾಂಗಣಗಳಲ್ಲಿ ಪಂದ್ಯ ಆರಂಭಕ್ಕೆ ಮೊದಲು (ಆಯಾ ದೇಶಗಳ) ರಾಷ್ಟ್ರಗೀತೆ ನುಡಿಸುವ ವೇಳೆ ಈ ಭಾರಿ ಗಾತ್ರದ ಧ್ವಜಗಳನ್ನು ಕ್ರೀಡಾಂಗಣಕ್ಕೆ ತಂದು ಪ್ರದರ್ಶಿಸಲಾಗುತ್ತಿದೆ. ಈ ರೀತಿ ಮರುಬಳಕೆಯ ಬಾಟಲುಗಳಿಂದ ಧ್ವಜಗಳನ್ನು ತಯಾರಿಸಿದ ವಿಶ್ವದ ಮೊದಲ ಕಂಪನಿ ಕೋಕಾಕೋಲಾ ಆಗಿದೆ ಎಂದು ಪ್ರಕಟಣೆ ತಿಳಿಸಿದೆ.

ಒಂದು ರಾಷ್ಟ್ರದ ಧ್ವಜ ತಯಾರಿಸಲು ಸುಮಾರು 11,000 ಪೆಟ್ ಬಾಟಲುಗಳ ಬಳಕೆಯಾಗಿದೆ. ಏಕತಾ ಧ್ವಜ ತಯಾರಿಸಲು 2,000 ಬಾಟಲುಗಳ ಬಳಕೆ ಮಾಡಲಾಗಿದೆ.

ನೂರು ಕಾರ್ಮಿಕರ ತಂಡವು 25 ದಿನಗಳ ಕಾಲ (ಒಟ್ಟು 300 ಗಂಟೆ) ಕೆಲಸ ಮಾಡಿ ಈ ಧ್ವಜಗಳಿಗೆ ಜೀವ ತುಂಬಿದೆ. ಗಣೇಶ ಇಕೋವರ್ಸ್ ಲಿಮಿಟೆಡ್ನಿಂದ ಈ ಧ್ವಜಗಳನ್ನು ಗೋರಿವೈಸ್ ಕಂಪನಿ ತಯಾರಿಸಿದೆ.

ವಿಶ್ವಕಪ್ ಪಂದ್ಯಗಳ ಸಮಯದಲ್ಲಿ ತಾಜ್ಯನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲು ಕೋಕಾ ಕೋಲಾ ಹಲವು ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ ಎಂದೂ ಪ್ರಕಟಣೆ ತಿಳಿಸಿದೆ. ‘ಸುಸ್ಥಿರತೆಯ ಪ್ರಯತ್ನಗಳನ್ನು ಬೆಂಬಲಿಸುವ ಧ್ಯೇಯವನ್ನು ಕಂಪನಿಯು ಹೊಂದಿದೆ. ಇದರ ಭಾಗವಾಗಿ ಮರುಬಳಕೆ ಮಾಡಿದ ಬಾಟಲುಗಳಿಂದ ಧ್ವಜಗಳನ್ನು ತಯಾರಿಸಿದ್ದು, ಇದರ ಅನಾವರಣ ಹೆಮ್ಮೆ ಮೂಡಿಸುತ್ತಿದೆ’ ಎಂದು ಕೋಕಾ ಕೋಲಾ ಇಂಡಿಯಾ ಮತ್ತು ನೈರುತ್ಯ ಏಷ್ಯಾ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಅರ್ನಬ್ ರಾಯ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.