ಬೆಂಗಳೂರು: ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಲೀಗ್ ಸುತ್ತಿನ ಪಂದ್ಯಗಳು ಇಂದು ಮುಕ್ತಾಯವಾಗಲಿದ್ದು ಸೆಮಿಫೈನಲ್‌ಗೆ ನಾಲ್ಕು ತಂಡಗಳು ಪ್ರವೇಶ ಪಡೆದಿವೆ.

ಇಂದು ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ಲೀಗ್ ಸುತ್ತಿನ ಕೊನೆಯ ಪಂದ್ಯ ಆಡಲಿವೆ. ಇದರೊಂದಿಗೆ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಲಿದ್ದು ನವೆಂಬರ್ 15ರಂದು ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿವೆ.
.CWC 2023 IND vs NED: ‘ಶತಕಗಳ ಅರ್ಧಶತಕ’ ಪೂರೈಸುವರೇ ಕೊಹ್ಲಿ?.CWC 2023 AUS Vs BAN: ಮಾರ್ಷ್ ಆಬ್ಬರದ ಆಟಕ್ಕೆ ಬಾಂಗ್ಲಾ ನಿರುತ್ತರ.
ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿರುವ ತಂಡಗಳು...

ಭಾರತ

ದಕ್ಷಿಣ ಆಫ್ರಿಕಾ

ಆಸ್ಟ್ರೇಲಿಯಾ

ನ್ಯೂಜಿಲೆಂಡ್

ಮೊದಲ ಸೆಮಿಫೈನಲ್ ಪಂದ್ಯ...

ಲೀಗ್ ಹಂತದಲ್ಲಿ ಆಡಿರುವ ಎಲ್ಲ ಪಂದ್ಯಗಳಲ್ಲೂ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತಕ್ಕೆ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮೊದಲ ಸೆಮಿಫೈನಲ್‌ನಲ್ಲಿ ಸವಾಲೊಡ್ಡಲಿದೆ.

ಈ ಪಂದ್ಯ ನವೆಂಬರ್ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಎರಡನೇ ಸೆಮಿಫೈನಲ್ ಪಂದ್ಯ

ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣಾ ಆಫ್ರಿಕಾವು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡವನ್ನು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಎದುರಿಸಲಿದೆ.

ಈ ಪಂದ್ಯ ನವೆಂಬರ್ 16ರಂದು ಕೋಲ್ಕತ್ತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿವೆ.

ಲೀಗ್ ಹಂತದ ಸಾಧನೆ

ಭಾರತ: 8 ಪಂದ್ಯಗಳಲ್ಲಿ 8 ಜಯ

ದಕ್ಷಿಣ ಆಫ್ರಿಕಾ: 9 ಪಂದ್ಯಗಳಲ್ಲಿ 7 ಜಯ

ಆಸ್ಟ್ರೇಲಿಯಾ: 9 ಪಂದ್ಯಗಳಲ್ಲಿ 7 ಜಯ

ನ್ಯೂಜಿಲೆಂಡ್: 9 ಪಂದ್ಯಗಳಲ್ಲಿ 5 ಜಯ
.CWC 2023 | ಪಾಕ್ ತಂಡಕ್ಕೆ ನಿರಾಶೆ, ಜಯದೊಂದಿಗೆ ಅಭಿಯಾನ ಮುಗಿಸಿದ ಇಂಗ್ಲೆಂಡ್.CWC 2023: ಚೇಸಿಂಗ್ ವೇಳೆ ಮೊದಲ ದ್ವಿಶತಕ; ಹಲವು ದಾಖಲೆ ಬರೆದ ಮ್ಯಾಕ್ಸ್ವೆಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.