ಬೆಂಗಳೂರು: ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ತೋರಿದ್ದ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿತು. ಆ ಮೂಲಕ ತಮ್ಮ ಬೆನ್ನೇರಿರುವ ‘ಚೋಕರ್ಸ್’ ಪಟ್ಟ ಕಳಚಿಕೊಳ್ಳುವಲ್ಲಿ ವಿಫಲವಾಯಿತು.

ಕೋಲ್ಕತ್ತದ ಈಡನ್ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ಎಂದಿನ ಲಯದಲ್ಲಿ ರನ್ ಗಳಿಸಲು ವಿಫಲವಾಯಿತು. ಸಾಹಸಮಯ ಶತಕ (101 ರನ್) ಸಿಡಿಸಿದ ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್ (47) ಬಿಟ್ಟರೆ ಉಳಿದವರು ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ಹೀಗಾಗಿ 49.4 ಓವರ್ಗಳಲ್ಲಿ 212 ರನ್ ಗಳಿಸಿ ಆಲೌಟ್ ಆಯಿತು.

ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 47.2 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿ 8ನೇ ಬಾರಿ ಫೈನಲ್ಗೆ ಲಗ್ಗೆ ಇಟ್ಟಿತು.

ಚೋಕರ್ಸ್ ಪಟ್ಟ
ದಕ್ಷಿಣ ಆಫ್ರಿಕಾ ತಂಡಕ್ಕೆ ಸೆಮಿಫೈನಲ್ನಲ್ಲಿ ಎದುರಾದ 5ನೇ ಸೋಲು ಇದು. ಈ ಹಿಂದೆ 1992, 1999, 2007 ಹಾಗೂ 2015ರ ಸೆಮಿಫೈನಲ್ಗಳಲ್ಲಿ ಸೋಲು ಎದುರಾಗಿತ್ತು.

ವಿಶ್ವಕಪ್ನ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರುವ ಈ ತಂಡ ಪದೇ ಪದೆ ನಾಕೌಟ್ ಪಂದ್ಯಗಳಲ್ಲಿ ಎಡವುತ್ತಿರುವ ಕಾರಣ, ಚೋಕರ್ಸ್ ಪಟ್ಟ ಕಟ್ಟಿಕೊಂಡಿದೆ. ಅದಕ್ಕೆ ತಕ್ಕಂತೆಯೇ ಈ ಬಾರಿಯೂ ಆಡಿತು.
.ವಿಶ್ವಕಪ್ ಸೆಮಿಫೈನಲ್ನಲ್ಲಿ ಎಡವಿದ ದ.ಆಫ್ರಿಕಾ; ಭಾರತ–ಆಸ್ಟ್ರೇಲಿಯಾ ಫೈನಲ್ ಫೈಟ್.ಕೊಹ್ಲಿ ಆಟ ಸುಧಾರಿಸುತ್ತಲೇ ಇದೆ: ಎದುರಾಳಿ ತಂಡಗಳಿಗೆ ಕೇನ್ ವಿಲಿಯಮ್ಸನ್ ಎಚ್ಚರಿಕೆ.
ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದ್ದ ಆಫ್ರಿಕಾ, ಲೀಗ್ ಹಂತದಲ್ಲಿ ರನ್ ಹೊಳೆ ಹರಿಸಿತ್ತು. ಲೀಗ್ನಲ್ಲಿ ಗೆದ್ದ 7 ಪಂದ್ಯಗಳ ಪೈಕಿ 5ರಲ್ಲಿ ನೂರಕ್ಕಿಂತ ಹೆಚ್ಚು ರನ್ ಅಂತರದಲ್ಲಿ ಜಯ ಸಾಧಿಸಿತ್ತು. ಇನ್ನೆರಡು ಗೆಲುವುಗಳನ್ನು ಗುರಿ ಬೆನ್ನತ್ತಿ ದಕ್ಕಿಸಿಕೊಂಡಿತ್ತು. ಹೀಗಾಗಿ ತೆಂಬಾ ಬವುಮಾ ಬಳಗ ಸಾಕಷ್ಟು ನಿರೀಕ್ಷೆಗಳನ್ನು ಸೃಷ್ಟಿಸಿತ್ತು.

ಆದರೆ ಮಹತ್ವದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿತು.

ಲೀಗ್ನಲ್ಲಿ ದಕ್ಷಿಣ ಆಫ್ರಿಕಾ ಸಾಧನೆ
* ಮೊದಲ ಪಂದ್ಯ: ಶ್ರೀಲಂಕಾ ವಿರುದ್ಧ 102 ರನ್ ಜಯ
* ಎರಡನೇ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ 134 ರನ್ ಜಯ
* ಮೂರನೇ ಪಂದ್ಯ: ನೆದರ್ಲೆಂಡ್ಸ್ ವಿರುದ್ಧ 38 ರನ್ ಸೋಲು
* ನಾಲ್ಕನೇ ಪಂದ್ಯ: ಇಂಗ್ಲೆಂಡ್ ಎದುರು 229 ರನ್ ಜಯ
* ಐದನೇ ಪಂದ್ಯ: ಬಾಂಗ್ಲಾದೇಶ ವಿರುದ್ಧ 149 ರನ್ ಜಯ
* ಆರನೇ ಪಂದ್ಯ: ಪಾಕಿಸ್ತಾನ ಎದುರು 1 ವಿಕೆಟ್ ಜಯ
* ಏಳನೇ ಪಂದ್ಯ: ನ್ಯೂಜಿಲೆಂಡ್ ವಿರುದ್ಧ 190 ರನ್ ಜಯ
* ಎಂಟನೇ ಪಂದ್ಯ: ಭಾರತ ವಿರುದ್ಧ 243 ರನ್ ಸೋಲು

2016ರಿಂದ ಆಸ್ಟ್ರೇಲಿಯಾ ವಿರುದ್ಧ ಪ್ರಾಬಲ್ಯ
ದಕ್ಷಿಣ ಆಫ್ರಿಕಾ ಪಡೆ, 2016ರಿಂದ ಈಚೆಗೆ ಆಡಿದ ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಪ್ರಾಬಲ್ಯ ಮೆರೆದಿತ್ತು. ಆಡಿರುವ 22 ಪಂದ್ಯಗಳಲ್ಲಿ 16ರಲ್ಲಿ ಗೆದ್ದು, 5 ರಲ್ಲಷ್ಟೇ ಸೋಲು ಕಂಡಿತ್ತು.

ಇದಷ್ಟೇ ಅಲ್ಲ. ವಿಶ್ವಕಪ್ಗೂ ಮುನ್ನ ಆಡಿದ 5 ಪಂದ್ಯಗಳ ಸರಣಿಯನ್ನು 3–2 ಅಂತರಿಂದ ಗೆದ್ದುಕೊಂಡಿತ್ತು. ಈ ಎಲ್ಲ ಗೆಲುವುಗಳು ನೂರಕ್ಕಿಂತ ಹೆಚ್ಚು ರನ್ ಅಂತರದಿಂದ ಬಂದಿದ್ದವು. ಸಾಲದ್ದಕ್ಕೆ ವಿಶ್ವಕಪ್ನ ಲೀಗ್ 134 ರನ್ ಅಂತರದಿಂದ ಆಸ್ಟ್ರೇಲಿಯಾಗೆ ಸೋಲುಣಿಸಿತ್ತು. ಆದರೂ, ಬವುಮಾ ಪಡೆ ಈ ಸಲ ಸೆಮಿಫೈನಲ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ಮೊದಲು ಬ್ಯಾಟಿಂಗ್ ಮಾಡಿದಾಗಲೆಲ್ಲ ಅಬ್ಬರಿಸಿದ್ದ ಈ ತಂಡದ ಬ್ಯಾಟರ್ಗಳು ಆಸ್ಟ್ರೇಲಿಯಾ ಬೌಲರ್ಗಳೆದುರು ನಿರುತ್ತರರಾದರು. ಇದು ಮುಳುವಾಯಿತು.

ಆಸ್ಟ್ರೇಲಿಯಾಗೆ 8ನೇ ಫೈನಲ್
ಏಕದಿನ ಕ್ರಿಕೆಟ್ನ ಅತ್ಯಂತ ಯಶಸ್ವಿ ತಂಡ ಎನಿಸಿರುವ ಆಸ್ಟ್ರೇಲಿಯಾ 8ನೇ ಬಾರಿ ವಿಶ್ವಕಪ್ ಫೈನಲ್ಗೆ ಲಗ್ಗೆ ಇಟ್ಟಿದೆ. ಈವರೆಗೆ ಆಡಿರುವ 7 ಫೈನಲ್ ಪಂದ್ಯಗಳಲ್ಲಿ ಐದರಲ್ಲಿ ಜಯದ ನಗೆ ಬೀರಿ ಚಾಂಪಿಯನ್ ಪಟ್ಟಕ್ಕೇರಿರುವ ಆಸಿಸ್ಗೆ, ಎರಡರಲ್ಲಷ್ಟೇ ಸೋಲು ಎದುರಾಗಿದೆ.

1975ರಲ್ಲಿ ಮೊದಲ ವಿಶ್ವಕಪ್ ಟೂರ್ನಿಯಲ್ಲೇ ಫೈನಲ್ಗೇರಿದ್ದ ಕಾಂಗರೂಗಳಿಗೆ ಪ್ರಶಸ್ತಿ ದಕ್ಕಿರಲಿಲ್ಲ. ಬಲಿಷ್ಠ ವೆಸ್ಟ್ಇಂಡೀಸ್ ವಿರುದ್ಧ ಸೋಲು 17 ಅಂತರದ ಸೋಲು ಕಂಡಿತ್ತು. ಆದರೆ, ಅದಾದ 12 ವರ್ಷಗಳ ನಂತರ (1987ರಲ್ಲಿ) ಮೊದಲ ಪ್ರಶಸ್ತಿ ಒಲಿಸಿಕೊಂಡಿತ್ತು.

1992ರಲ್ಲಿ ನ್ಯೂಜಿಲೆಂಡ್ನೊಂದಿಗೆ ಜಂಟಿ ಆತಿಥ್ಯ ವಹಿಸಿದ್ದ ಆಸ್ಟ್ರೇಲಿಯನ್ನರು ಸೆಮಿಫೈನಲ್ ಸಹ ತಲುಪಿರಲಿಲ್ಲ. 1996ರ ಫೈನಲ್ನಲ್ಲಿ ಮತ್ತೆ ಶ್ರೀಲಂಕಾ ಎದುರು ಫೈನಲ್ನಲ್ಲಿ 7 ವಿಕೆಟ್ ಅಂತರದ ಸೋಲು ಎದುರಾಗಿತ್ತು. ನಂತರದ ಮೂರು (1999, 2003, 2000) ವಿಶ್ವಕಪ್ಗಳಲ್ಲಿ ಫೈನಲ್ಗೇರಿ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದ ಮೊದಲ ತಂಡ ಎನಿಸಿಕೊಂಡಿತ್ತು.

2015ರಲ್ಲಿ ಮತ್ತೊಮ್ಮೆ ಫೈನಲ್ಗೇರಿ ಜಯದ ಸವಿಯುಂಡಿತ್ತು.

ಭಾರತ–ಆಸ್ಟ್ರೇಲಿಯಾ ಎರಡನೇ ಮುಖಾಮುಖಿ
ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಎರಡನೇ ಬಾರಿ ಎದುರಾಗಲಿವೆ.

2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟೂರ್ನಿಯ ಫೈನಲ್ನಲ್ಲಿ ಉಭಯ ತಂಡಗಳು ಹಣಾಹಣಿ ನಡೆಸಿದ್ದವು. ಜೊಹಾನೆಸ್ಬರ್ಗ್ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಅಂದು ನಡೆದಿದ್ದ ಫೈನಲ್ನಲ್ಲಿ ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ, ಸೌರವ್ ಗಂಗೂಲಿ ಸಾರಥ್ಯದ ಭಾರತ ತಂಡವನ್ನು 125 ರನ್ಗಳಿಂದ ಮಣಿಸಿ ಚಾಂಪಿಯನ್ ಆಗಿತ್ತು.

ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ 2 ವಿಕೆಟ್ಗಳಿಗೆ 359 ರನ್ ಗಳಿಸಿದ್ದರೆ, ಭಾರತ 39.2 ಓವರ್ಗಳಲ್ಲಿ 234 ರನ್ಗಳಿಗೆ ಆಲೌಟಾಗಿತ್ತು.

ಎರಡು ದಶಕಗಳ ಹಿಂದೆ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸುವ ಅವಕಾಶ ಭಾರತಕ್ಕೆ ಈ ಬಾರಿ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.