ಮುಂಬೈ: ಇಂದು ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧ 70 ರನ್‌ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತು.

ಈ ಮೂಲಕ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ನಾಲ್ಕನೇ ಭಾರಿಗೆ ಫೈನಲ್ ಪ್ರವೇಶ ಮಾಡಿದಂತಾಯಿತು.

ಕಳೆದ 2019ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಕಿವೀಸ್ ಬಳಗದ ಎದುರು ಸೋತಿದ್ದ ಭಾರತ ತಂಡವು ಪ್ರಶಸ್ತಿ ಗೆಲುವಿನ ಅವಕಾಶ ಕಳೆದುಕೊಂಡಿತ್ತು. ಈಗ ಆ ಸೋಲಿನ ಮುಯ್ಯಿ ತೀರಿಸಿಕೊಳ್ಳುವುದರ ಜೊತೆಗೆ 12 ವರ್ಷಗಳ ನಂತರ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಡುವ ಛಲವನ್ನು ಭಾರತ ಸಾಧಿಸಿತು.

ಟೀಮ್ ಇಂಡಿಯಾ ನೀಡಿದ್ದ ಬೃಹತ್ 397 ರನ್‌ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ಉತ್ತಮ ಹೋರಾಟ ನೀಡಿತಾದರೂ ಗುರಿ ತಲುಪುವಲ್ಲಿ ವಿಫಲವಾಯಿತು. 48.5 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 327 ರನ್ ಗಳಿಸಲಷ್ಟೇ ಶಕ್ತವಾಯಿತು.

ನ್ಯೂಜಿಲೆಂಡ್ ಪರ ಡೇರೆಲ್ ಮಿಚಲ್ ಅವರು 119 ಬಾಲ್‌ಗಳಲ್ಲಿ 134 ರನ್ ಗಳಿಸಿ ಗಮನ ಸೆಳೆದರು. ಭರವಸೆ ಹುಟ್ಟಿಸಿದ್ದ ರಚಿನ್ ರವೀಂದ್ರ (13) ಹಾಗೂ ಡಿವೊನ್ ಕಾನ್‌ವಾಯ್ ಅವರು 13 ರನ್ ಗಳಿಸಿ ವಿಫಲರಾದರು.

ಇದಕ್ಕೂ ಮುನ್ನ ಭಾರತ ನಿಗದಿತ 50 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 397 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

113 ಎಸೆತಗಳನ್ನು ಎದುರಿಸಿದ ವಿರಾಟ್ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ 117 ರನ್ ಗಳಿಸಿದರು.

ಟೀಮ್ ಇಂಡಿಯಾ ಪರ ಶುಭಮನ್ ಗಿಲ್ (80*), ರೋಹಿತ್ ಶರ್ಮಾ (47) ಹಾಗೂ ಕೆ.ಎಲ್ ರಾಹುಲ್ (39*) ಸಹ ಉಪಯುಕ್ತ ಕಾಣಿಕೆ ನೀಡಿದರು.

ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅಲ್ಲದೆ ಶುಭಮನ್ ಗಿಲ್ ಅವರ ಜೊತೆ ಸೇರಿ ಬಿರುಸಿನ ಆರಂಭವನ್ನು ಒದಗಿಸಿದ್ದರು.
.CWC 2023 | ವಿರಾಟ್ 'ಶತಕಗಳ ಅರ್ಧಶತಕ' - ಮುರಿಯಿತು ಕ್ರಿಕೆಟ್ ದೇವರ ದಾಖಲೆ.IND vs NZ: ಸಚಿನ್, ಪಾಂಟಿಂಗ್ ದಾಖಲೆ ಮುರಿದ ಕಿಂಗ್ ಕೊಹ್ಲಿ.PHOTOS | ರೋಹಿತ್ ದಾಖಲೆ -ವಿಶ್ವಕಪ್ನಲ್ಲಿ 50 ಸಿಕ್ಸರ್ ಬಾರಿಸಿದ ಮೊದಲ ಬ್ಯಾಟರ್.CWC | ವಿಶ್ವಕಪ್ನಲ್ಲಿ 50 ಸಿಕ್ಸರ್; ಗೇಲ್ ದಾಖಲೆ ಮುರಿದ ರೋಹಿತ್ ವಿಶ್ವದಾಖಲೆ.
ರೋಹಿತ್ ಹಾಗೂ ಗಿಲ್ ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 71 ರನ್ ಪೇರಿಸಿದರು. ಹಿಟ್ ಮ್ಯಾನ್ 29 ಎಸೆತಗಳಲ್ಲಿ ತಲಾ ನಾಲ್ಕು ಸಿಕ್ಸರ್ ಹಾಗೂ ಬೌಂಡರಿಗಳಿಂದ 47 ರನ್ ಗಳಿಸಿದರು.

ಬಳಿಕ ಕ್ರೀಸಿಗಿಳಿದ ವಿರಾಟ್ ಕೊಹ್ಲಿಗೆ ಗಿಲ್ ಸಾಥ್ ನೀಡಿದರು. ಅಲ್ಲದೆ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ನೋವಿನ ಸಮಸ್ಯೆಗೊಳಗಾಗಿ ಗಿಲ್ ನಿವೃತ್ತಿ ಹೊಂದಿದರು. ಈ ವೇಳೆ ಗಿಲ್ 65 ಎಸೆತಗಳಲ್ಲಿ 79 ರನ್ (8 ಬೌಂಡರಿ, 3 ಸಿಕ್ಸರ್) ಗಳಿಸಿದರು. ಇನಿಂಗ್ಸ್ ಕೊನೆಯಲ್ಲಿ ಮತ್ತೆ ಬ್ಯಾಟಿಂಗ್ ಮಾಡಲು ಕ್ರೀಸಿಗಿಳಿದ ಗಿಲ್ ಅಂತಿಮವಾಗಿ 66 ಎಸೆತಗಳಲ್ಲಿ 80 ರನ್ ಗಳಿಸಿ ಔಟಾಗದೆ ಉಳಿದರು.

ವಿರಾಟ್ ಐತಿಹಾಸಿಕ ದಾಖಲೆ...

ಈ ನಡುವೆ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್, ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಅರ್ಧಶತಕಗಳ ಐತಿಹಾಸಿಕ ಸಾಧನೆ ಮಾಡಿದರು. ಆ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ದಾಖಲೆಯನ್ನು (49 ಶತಕ) ಮುರಿದರು.

ವಿರಾಟ್‌ಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರಿಂದ ಉತ್ತಮ ಬೆಂಬಲ ದೊರಕಿತು. ಅಲ್ಲದೆ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ಅಯ್ಯರ್ 67 ಎಸತೆಗಳಲ್ಲಿ ಶತಕ ಗಳಿಸಿ ಮಿಂಚಿದರು. ಇದು ಐಸಿಸಿ ಏಕದಿನ ವಿಶ್ವಕಪ್ ನಾಕೌಟ್‌ನಲ್ಲಿ ದಾಖಲಾದ ಅತಿ ವೇಗದ ಶತಕವಾಗಿದೆ.

ಶ್ರೇಯಸ್ 70 ಎಸೆತಗಳಲ್ಲಿ 105 ರನ್ ಗಳಿಸಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಇನಿಂಗ್ಸ್‌ನಲ್ಲಿ ಎಂಟು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಸೇರಿದ್ದವು.

ಕೊನೆಯ ಹಂತದಲ್ಲಿ ಕೆ.ಎಲ್. ರಾಹುಲ್ 39* ರನ್‌ಗಳ (20 ಎಸೆತ, 5 ಬೌಂಡರಿ, 2 ಸಿಕ್ಸರ್) ಉಪಯುಕ್ತ ಕಾಣಿಕೆ ನೀಡಿದರು. ನ್ಯೂಜಿಲೆಂಡ್ ಪರ ಟಿಮ್ ಸೌಥಿ 100 ರನ್ ತೆತ್ತು ಮೂರು ವಿಕೆಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.