ಲಡಾಖ್ ಪ್ರದೇಶಕ್ಕಾಗಿಯೇ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ವಿಶೇಷ ವಿಂಟರ್–ಗ್ರೇಡ್ ಡೀಸೆಲ್ ಬಿಡುಗಡೆ ಮಾಡಿದೆ. ಭಾರತದ ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಇದು ಪ್ರಮುಖ ಚಾಲನಾಶಕ್ತಿಯಾಗಿ ಬಳಕೆಯಾಗುತ್ತಿದೆ. ಭಾರತ–ಚೀನಾ ನಡುವಿನ ಪ್ರಕ್ಷುಬ್ಧತೆ ಶಮನಗೊಂಡಿರದ ಕಾರಣ ಈ ಬಾರಿಯ ಚಳಿಗಾಲಕ್ಕೆ ಭದ್ರತಾ ಪಡೆಗಳು ಸೂಕ್ತ ಸಿದ್ಧತೆಯಲ್ಲಿ ತೊಡಗಿವೆ.

ಚಳಿಗಾಲದಲ್ಲಿನ ಬಳಕೆಗಾಗಿಯೇ ತಯಾರಿಸಲಾಗಿರುವ ವಿಶೇಷ ತೈಲ ಮೈನಸ್ (–) 33 ಡಿಗ್ರಿ ಸೆಲ್ಸಿಯಸ್‌ನಷ್ಟು ಶೀತಮಯ ವಾತಾವರಣದಲ್ಲೂ ಬಳಕೆಗೆ ಅನುವಾಗುತ್ತದೆ. ಗಡಿ ಭಾಗಗಳಲ್ಲಿ ಸೇನಾ ಚಟುವಟಿಕೆಗಳನ್ನು ಹೆಚ್ಚಿಸಿರುವುದರಿಂದ ಈ ತೈಲಕ್ಕೆ ಬೇಡಿಕೆ ಇನ್ನಷ್ಟು ಹೆಚ್ಚಾಗಬಹುದೆಂದು ಐಒಸಿ ಅಂದಾಜಿಸಿದೆ.

ಕಳೆದ ವರ್ಷ ಚಳಿಗಾಲದಲ್ಲಿ ಭಾರತೀಯ ಸಶಸ್ತ್ರ ಪಡೆಗಳು 350 ಮೆಟ್ರಿಕ್ ಟನ್ ತೈಲ ಬಳಕೆ ಮಾಡಿಕೊಂಡಿದ್ದವು. ಜಮ್ಮು ಮತ್ತು ಕಾಶ್ಮೀರದಿಂದ ಪ್ರತ್ಯೇಕವಾಗಿ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ಬೆನ್ನಲ್ಲೇ 2019ರ ನವೆಂಬರ್ 19ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಲಡಾಖ್‌ಗಾಗಿಯೇ ವಿಶೇಷ ತೈಲ ಬಳಕೆಗೆ ಚಾಲನೆ ನೀಡಿದ್ದರು.

ಏನಿದು ವಿಂಟರ್–ಗ್ರೇಡ್ ಡೀಸೆಲ್?

ಲಡಾಖ್ ರೀತಿಯ ಎತ್ತರ ಪ್ರದೇಶಗಳು ಹಾಗೂ ಕಡಿಮೆ ಉಷ್ಣಾಂಶದ ಹೆಪ್ಪುಗಟ್ಟುವ ವಾತಾವರಣವಿರುವ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಸಾಮಾನ್ಯ ಡೀಸೆಲ್ ಬಳಕೆ ಅಸಾಧ್ಯವಾಗುತ್ತದೆ. ಅಂಥ ಸ್ಥಳಗಳಲ್ಲಿ ವಾಹನಗಳ ಸಂಚಾರಕ್ಕೆ ಅನುವಾಗುವ ನಿಟ್ಟಿನಲ್ಲಿ ಐಒಸಿಎಲ್ ಕಳೆದ ವರ್ಷ ವಿಂಟರ್ ಡೀಸೆಲ್ ಪರಿಚಯಿಸಿತು. ಉಷ್ಣಾಂಶ ಕಡಿಮೆಯಾಗುತ್ತಿದ್ದಂತೆ ಡೀಸೆಲ್ ಸಹ ಹೆಪ್ಪುಗಟ್ಟುತ್ತದೆ. ವಿಂಟರ್ ಡೀಸೆಲ್‌ನಿಂದಾಗಿ ಲಡಾಖ್, ಕಾರ್ಗಿಲ್, ಕಾಜಾ ಹಾಗೂ ಕಿಲಾಂಗ್ ಪ್ರದೇಶಗಳಲ್ಲಿ ಚಳಿಗಾಲದಲ್ಲಿಯೂ ವಾಹನಗಳು ನಿಲ್ಲದೆ ಸಂಚರಿಸುತ್ತಿವೆ.

ಗುಣಮಟ್ಟ ಆಶ್ವಾಸನೆ ನೀಡುವ ಭದ್ರತಾ ಪಡೆಗಳ ಮಹಾನಿರ್ದೇಶಾಲಯ (ಡಿಜಿಕ್ಯೂಎ) ಅನುಮತಿಯ ಮೇರೆಗೆ ಸೇನಾ ವಾಹನಗಳಿಗೆ ವಿಂಟರ್ ಬಳಕೆ ಮಾಡಲಾಗುತ್ತದೆ. ವಿಂಟರ್ ಡೀಸೆಲ್‌ನಲ್ಲಿ ಅಡಿಟಿವ್ಸ್ (ಸಂಯೋಜಕಗಳು) ಕಡಿಮೆ ಜಿಗುಟುತನ ಮಟ್ಟವನ್ನು ಉಳಿಸಿಕೊಳ್ಳುತ್ತವೆ. ಇಂಧನ ದಹನ ಕ್ರಿಯೆಯ ವೇಗ ಅಧಿಕವಾಗಿರುತ್ತದೆ (ಸೀಟೇನ್ ರೇಟಿಂಗ್) ಹಾಗೂ ಸಲ್ಫರ್ (ಗಂಧಕ) ಅಂಶ ಕಡಿಮೆ ಇರುವುದರಿಂದ ಇಂಧನ ಕ್ಷಮತೆ ಹೆಚ್ಚುತ್ತದೆ.

ವಿಂಟರ್ ಡೀಸೆಲ್ ಬಳಕೆಗೂ ಮುನ್ನ ಕಡಿಮೆ ಉಷ್ಣಾಂಶವಿರುವ ಪ್ರದೇಶಗಳಲ್ಲಿ ಡೀಸೆಲ್ ಜೊತೆಗೆ ಸೀಮೆಎಣ್ಣೆ (ಕೆರೊಸಿನ್) ಬೆರೆಸುವ ತಂತ್ರದ ಮೂಲಕ ಡೀಸೆಲ್ ಗಡ್ಡೆ ಕಟ್ಟದಂತೆ ಎಚ್ಚರ ವಹಿಸಲಾಗುತ್ತಿತ್ತು. ಇದರಿಂದಾಗಿ ವಾಯುಮಾಲಿನ್ಯ ಅತಿಯಾಗುತ್ತದೆ.

ಪ್ರಸ್ತುತ ಸಶಸ್ತ್ರ ಪಡೆಗಳು ಬಳಸುತ್ತಿರುವ ತೈಲ?

ಐಒಸಿಎಲ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಗಳು ದೇಶದ ಸಶಸ್ತ್ರ ಪಡೆಗಳಿಗೆ ಡೀಸೆಲ್ ಹೈ ಸಲ್ಫರ್ ಪೌರ್ ಪಾಯಿಂಟ್ (DHPP-W) ತೈಲ ಪೂರೈಸುತ್ತಿವೆ. ಈ ಗುಣಮಟ್ಟದ ಡೀಸೆಲ್ ಸಹ ಮೈನಸ್ (–) 30 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಉಷ್ಣಾಂಶದಲ್ಲಿಯೂ ವಾಹನ ಚಾಲನೆಗೆ ಸಹಕಾರಿಯಾಗಿರುತ್ತದೆ.

ಅಂಕಿ–ಅಂಶ

* 350 ಮೆಟ್ರಿಕ್ ಟನ್ ತೈಲ: ಕಳೆದ ವರ್ಷ ಡಿಸೆಂಬರ್, ಜನವರಿ ಹಾಗೂ ಫೆಬ್ರುವರಿಯಲ್ಲಿ ವಿಶೇಷ ತೈಲ ಬಳಕೆ

* –33 ಡಿಗ್ರಿ ಸೆಲ್ಸಿಯನ್‌ನಷ್ಟು ಶೀತ ವಾತಾವರಣದಲ್ಲೂ ವಿಶೇಷ ತೈಲ ಗುಣ ಕಳೆದುಕೊಳ್ಳುವುದಿಲ್ಲ

* 1.20 ಲಕ್ಷ ಕಿಲೋ ಲೀಟರ್ ಚಳಿಗಾಲದ ವಿಶೇಷ ತೈಲ ಸಂಗ್ರಹ ಮಾಡಿಕೊಳ್ಳಲಾಗಿದೆ

* 3,300 ಟನ್ ಎಲ್‌ಪಿಜಿ ಸಂಗ್ರಹ

(ಮಾಹಿತಿ: Business Standard ಮತ್ತು TheIndianExpress)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.