ಬೆಂಗಳೂರು:ಮೈತ್ರಿ ಸರ್ಕಾರದ ಮೊದಲ ಬಜೆಟ್ನಲ್ಲಿ ರೈತರ ಸಾಲಮನ್ನ ಸೇರಿದಂತೆ ರೈತರಿಗಾಗಿ ಹಲವು ಯೋಜನೆಗಳನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದರು.

ರೈತರ ₹ 2ಲಕ್ಷ ವರೆಗಿನ ಕೃಷಿ ಸಾಲ ಮನ್ನಾದ ಜತೆ ಬಜೆಟ್ನಲ್ಲಿ ರೈತ ಸಮುದಾಯಕ್ಕೆ ಸಿಕ್ಕ ಇತರ ಭರವಸೆ, ಕೊಡುಗೆಗಳು ಇಲ್ಲಿವೆ.

ರೈತರ ಸಲಹಾ ಸಮಿತಿ ರಚನೆ
ರೈತರ ಬದುಕನ್ನು ಹಸನಾಗಿಸಲು, ಅವರ ಬಾಳಿನಲ್ಲಿ ಚೈತನ್ಯ ತುಂಬಲು ರೈತರ ಸಲಹಾ ಸಮಿತಿ ರಚಿಸಲಾಗುವುದು.

* ಈ ಸಮಿತಿ ಪ್ರತಿ ಜಿಲ್ಲೆಯ ಇಬ್ಬರು ಪ್ರಗತಿಪರ ರೈತರನ್ನು ಒಳಗೊಂಡಿರಲಿದೆ.

* ಪ್ರತಿ ಎರಡು ತಿಂಗಳಿಗೆ ಒಮ್ಮೆ ಈ ಸಮಿತಿ ಜತೆ ಚರ್ಚೆ ನಡೆಸಿ ರೈತರ ಸಮಸ್ಯೆ ಪರಿಹಾರಕ್ಕೆ ಕ್ರಮ

ಇಸ್ರೇಲ್ ಮಾದರಿ ಕೃಷಿ
ಇಸ್ರೇಲ್ಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಕೃಷಿಪದ್ಧತಿಯನ್ನು ಸ್ವತಹ ಅಧ್ಯಯನ ಮಾಡಿದ್ದೇನೆ ಎಂದ ಸಿಎಂ, ಇಸ್ರೆಲ್ ಮಾದರಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ರೈತರ ಬೆಳೆ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದರು.

* ಇಸ್ರೇಲ್ ಮಾದಿರಿ ನೀರಾವರಿ ಸೌಲಭ್ಯಕ್ಕೆ ₹150 ಕೋಟಿ.

* ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ತಲಾ 5 ಸಾವಿರ ಹೆಕ್ಟೇರ್ ಖಷ್ಕಿ ಜಮೀನಿನಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯಕ್ಕೆ ಈ ಮೊತ್ತ ಇಡಲಾಗಿದೆ.

ಆಂಧ್ರ ಮಾದರಿಯಲ್ಲಿ ಶೂನ್ಯ ಬಂಡವಾಳ ಸಹಜ ಕೃಷಿ
* ‘ಬೇಸಾಯ ನೀ ಸಾಯಾ‘ ಎಂಬ ವ್ಯಂಗ ನುಡಿಟ್ಟಿದೆ ಎಂದ ಸಿಎಂ, ಕೃಷಿ ಪರಿಕರ ಬೆಲೆ ಹೆಚ್ಚಳ, ಅನಿಶ್ಚಿತ ಮಳೆ ಕೃಷಿ ಉತ್ಪನ್ನಗಳ ಬೆಲೆ ಕುಸಿತ ರೈತರನ್ನು ಸಾಲಗಾರರನ್ನಾಗಿ ಮಾಡಿದೆ. ಈ ಪರಿಸ್ಥಿತಿಯಿಂದ ರೈತರನ್ನು ಹೊರತರಲು ಆಂಧ್ರ ಪ್ರದೇಶ ಸರ್ಕಾರ ಜಾರಿಗೊಳಿಸುತ್ತಿರುವ ಸೂನ್ಯ ಬಂಡವಾಳ ಸಹಜ ಕೃಷಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು.

* ಆಂಧ್ರ ಮಾದರಿ ಶೂಬ್ಯ ಬಂಡವಾಳ ಕೃಷಿ ಯೋಜನೆಗೆ ₹50 ಕೋಟಿ ಇಡಲಾಗಿದೆ.

ಕೃಷಿ ಸಮನ್ವಯ ಉನ್ನತ ಸಮಿತಿ
ರೈತರ ಸಂಕಷ್ಟವನ್ನು ನಿವಾರಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಚಿವರನ್ನೊಳಗೊಂಡ ಕೃಷಿ ಸಮನ್ವಯ ಸಮಿತಿ ರಚನೆ.

* ಈ ಸಮಿತಿ ಮೂರು ತಿಂಗಳಿಗೆ ಒಮ್ಮೆ ಸಭೆ ಸೇರಲಿದೆ.

* ಇಲಾಖೆಗಳ ಸಮನ್ವಯತೆ ಹಾಗೂ ಬಿತ್ತನೆಬೀಜದಿಂದ ಮಾರುಕಟ್ಟೆ ವರೆಗಿನ ಪರಿಣಾಮಗಳ ಮೌಲ್ಯಮಾಪನ ಮಾಡಲಿದೆ.

ರೈತ ಉತ್ಪಾದಕ ಸಂಸ್ಥೆ
ರೈತರ ಉತ್ಪನ್ನಗಳಿಗೆ ಬೆಲೆ ದೊರಲಿಸಲು ಹಾಗೂ ಸಂಘಟನೆ ಮತ್ತು ಬಲವರ್ಧನೆಗೆ ರಾಜ್ಯದ ರೈತ ಉತ್ಪಾದಕ ಸಂಸ್ಥೆ(ಎಫ್ಪಿಒ) ನೀತಿ ಜಾರಿಗೆ ಬರಲಿದೆ.

* ಈ ಸಂಸ್ಥೆ ಅಡಿ ರೈತರ ಸಂಘಟನೆ.

* ರೈತ ಉತ್ಪನ್ನಗಳಿಗೆ ಸೂಕ್ತ ಬೆಲೆ ಕಲ್ಪಿಸುವ ನಿಟ್ಟಿನಲ್ಲಿ ಕೆಲ ನಿರ್ವಹಿಸಲಿದೆ.

* ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ರೈತರ ಬೆಳೆಗಳ ಉತ್ಪಾದನೆ ಹೆಚ್ಚಿಸಲು ಹೊಸ ತಾಂತ್ರಿಕತೆ ಪರಿಚಯ.

* ಕೃಷಿಯಲ್ಲಿ ಸರಬರಾಜು ಸರಪಳಿ

* ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮಾರ್ಗಸೂಚಿಯಂತೆ ಯೋಜನೆ ರೂಪಿಸಲಾಗಿದೆ.

* ಈ ಯೋಜನೆಯಲ್ಲಿ ಸಿರಿಧಾನ್ಯ, ಬೇಳೆಕಾಳು, ಎಣ್ಣೆಕಾಳು, ಮುಸುಕಿನಜೋಳ ಇತ್ಯಾದಿ ಬೆಳೆಗಳಿಗೆ ಸೂಕ್ತ ಬೆಲೆ ಕಲ್ಪಿಸಲು ಕಾರ್ಯ ನಿರ್ವಹಿಸಲಿದೆ.

* ಮಂಡ್ಯ ಜಿಲ್ಲೆಯಲ್ಲಿ ಬೆಳೆ ಇಳುವರಿ ಕುಂಠಿತವಾಗಿದೆ. ಒಂದೇ ಮಾದರಿ ಬೆಳೆ ಬೆಳೆಯುವುದನ್ನು ಕಾರಣ. ಇದನ್ನು ತಪ್ಪಿಸಲು ಇತರ ಬೆಳೆಗಳ ಉತ್ಯೇಜನಕ್ಕೆ ಒತ್ತು.

* ಅಂಟುವಾಳ ಕಾಯಿ ಬಳಸಿ ಸಾಬೂನು ತಯಾರಿಸುವ ನಿಟ್ಟಿನಲ್ಲಿ ಅಂಟುವಾಳ ಬೆಳೆ ಉತ್ತೇಜನಕ್ಕೆ ಯೋನೆ ರೂಪಿಸಿದ್ದು ಅದಕ್ಕೆ ₹ 10 ಕೋಟಿ ಮೀಸಲಿಡಲಾಗಿದೆ.

* ರೈತರಿಗೆ ಸಣ್ಣ ಯಂತ್ರಚಾಲಿ ಎಣ್ಣೆ ಗಾಣಗಳ ವಿತರಣೆ. ಈ ಮೂಲಕ ಆರೋಗ್ಯಪೂರ್ಣ ಎಣ್ಣೆ ಉತ್ಪಾದನೆಗೆ ಪ್ರೋತ್ಸಾಹ.

* ಪರಿಶುದ್ಧ ಎಣ್ಣೆ ಮಾರಾಟಕ್ಕೆ ಇ–ಮಾರುಕಟ್ಟೆ ವ್ಯವಸ್ಥೆ ಯೋಜನೆ ಅನುಷ್ಠಾನಕ್ಕೆ ₹5ಕೋಟಿ ಇರಿಸಲಾಗಿದೆ.

* ಮೆಣಸಿನಕಾಯಿ, ಕಾಳುಮೆಣಸು, ಗೋಡಂಬಿ, ಜೀರಿಗೆ, ಕೊತ್ತಂಬರಿ, ಮೆಂತ್ಯೆ ಬೆಳಗಳ ದೀರ್ಘ ದಾಸ್ತಾನು ಮಾಡಲು ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ₹3 ಕೋಟಿ ನೀಡಲಾಗುವುದು.

ಕೃಷಿಯಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ
* ಡ್ರೋಣ್ ಬಳಸಿ ಬೆಳೆಯ ಪರಿಸ್ಥಿತಿ ತಿಳಿಯುವುದು.

* ನೀರಿನಲ್ಲಿ ಸೆನ್ಸಾರ್ ಉಪಯೋಗಿಸಿ ನೀರಿನ ಅವಶ್ಯಕತೆ ತಿಳಿಯುವುದು.

* ರೋಬೋಟ್ ಬಳಸಿ ಹತ್ತಿ ಕೀಳುವುದು.

* ಈ ತಂತ್ರಜ್ಞಾನಕ್ಕೆ ₹5 ಕೋಟಿ ಮೀಸಲು

* ಕರ್ನಾಟಕ ಅಂತರಗಂಗ ಸೂಕ್ಷ್ಮ ನೀರಾವರಿ ನಿಗಮ ನಿಯಮಿತ ಸಂಸ್ಥೆ ಸರ್ವಾಂಗೀಣ ಅಭಿವೃದ್ಧಿ, ಮೂಲ ಸೌಕರ್ಯಕ್ಕೆ ₹ 2 ಕೋಟಿ.

* ಗುಣಮಟ್ಟದ ಬೀಜ ದೃಢೀಕರಣ ಕೇಂದ್ರ ಸ್ಥಾನಪೆಗೆ ಕ್ರಮ. ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆಗೆ ₹5 ಕೋಟಿ ಅನುದಾನ.

ತೊಟಗಾರಿಕೆ
* ತೋಟಗಾರಿಕೆ ವಲಯದಲ್ಲಿ ಇಸ್ರೇಲ್ ಮಾದರಿ ಕೃಷಿಗೆ ಒತ್ತು.

* ಕಾರವಾರ, ತುಮಕೂರು, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳ ಪ್ರತಿ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನ.

* ಇದಕ್ಕೆ ₹5 ಕೋಟಿ ನಿಗದಿ ಮಾಡಲಾಗಿದೆ.

ಹೆದ್ದಾರಿ ಬದಿ 10 ಸುಸಜ್ಜಿತ ಮಾರುಕಟ್ಟೆ
* ಹೆದ್ದಾರಿಗಳ ಬದಿ ಖಾಸಗಿ ಸಹಬಾಗಿತ್ವದಲ್ಲಿ ರೈತರ ಉತ್ಪನ್ನಗಳಾದ ಸಿರಿಧಾನ್ಯ, ಸಾವಯವ ಉತ್ಪನ್ನಗಳು, ಹಣ್ಣು ಮತ್ತು ತರಕಾರಿಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಎಪಿಎಂಸಿ ವತಿಯಿಂದ 10 ಕಡೆ ಸುಸಜ್ಜಿತ ಮಾರುಕಟ್ಟೆ ಸ್ಥಾಪನೆ.

* ಇಂಡೋ–ಇಸ್ರೇಲ್ ಸಹಭಾಗಿತ್ವದಲ್ಲಿ ಉತ್ಕೃಷ್ಟ ಕೇಂದ್ರಗಳ ಅಭಿವೃದ್ಧಿಗೆ ಒತ್ತು.

* ತೆಂಗು ಬೆಳೆಗಾರರಿಗೆ ಯೋಜನೆ ರೂಪಿಸಿದ್ದು ₹ 190 ಕೋಟಿ ಇರಿಸಲಾಗಿದೆ.

* ಸಂಪೂರ್ಣ ಒಣಗಿದ ತೆಂಗಿನ ತೋಟಗಳಲ್ಲಿ ಪರ್ಯಾಯ ಬೆಳಯಾಗಿ ಮಾವು, ಗೋಡಂಬಿ, ಹುಣಸೆ, ಸೀತಾಫಲ, ನೇರಳೆ ಇತ್ಯಾದಿ ಬೆಳೆ ಬೆಳೆಯಲು ಒತ್ತು.

ರೇಷ್ಮೆ ಬೆಳೆಗಾರರ ಹಿತಕ್ಕೆ ಕ್ರಮ
* ಮೈಸೂರು ಜಿಲ್ಲೆಯಲ್ಲಿ 3 ಕೋಟಿ ವೆಚ್ಚದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ. ಇದಕ್ಕೆ 2018–19ರ ಸಾಲಿನಲ್ಲಿ ಒಂದು ಕೋಟಿ ಒದಗಿಸಲಾಗುವುದು.

* ತಲಘಟ್ಟಪುರದಲ್ಲಿನ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಪುನಶ್ಚೇತನಕ್ಕೆ ₹ 5 ಕೋಟಿ.

* ಸಾಂಪ್ರದಾಯಿ ರೇಷ್ಮೆ ಉತ್ಪನ್ನ ಜತೆ ಉಪ ಉತ್ಪನ್ನಗಳಾದ ಉಗುರು ಪಾಲೀಷ್, ಲಿಪ್ಸ್ಟಿಕ್ ಹಾಗೂ ರೇಷ್ಮೆ ಬಣ್ಣಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ಇದನ್ನು ಪ್ರೋತ್ಸಾಹಿಸಲು ₹2 ಕೋಟಿ ನೀಡಲಾಗುವುದು.

* ಚನ್ನಪಟ್ಟಣದ ರೇಷ್ಮೆ ಕೈಗಾರಿಕಾ ನಿಗಮದ ಪುನಶ್ಚೇತನಕ್ಕೆ ₹5 ಕೋಟಿ.

ಪಶು ಸಂಗೋಪನೆ
* ಪಶುಸಂಗೋಪನೆ ಉತ್ಯೇಜನಕ್ಕೆ ರಾಜ್ಯದ ವಿಭಾಗಮಟ್ಟದಲ್ಲಿ ಮೂರು ಘನೀಕೃತ ವೀರ್ಯಗಳ ವಿತರಣಾ ಕೇಂದ್ರಗಳ ಸ್ಥಾನಪನೆ.

* ಧಾರವಾಡ, ಕಲಬುರ್ಗಿ ಮೂಸೂರಿನಲ್ಲಿ ಈ ಕೇಂದ್ರಗಳ ಸ್ಥಾಪನೆ.

* ಈ ಮೂರು ಕೇಂದ್ರಗಳ ಸ್ಥಾಪನೆಗೆ ₹2.25 ಕೋಟಿ.

* ಪ್ರಾಯೋಗಿಕವಾಗಿ ಜಲ ಕೃಷಿ ವಿಧಾನದಿಂದ ಹಸಿರು ಮೇವು ಉತ್ಪಾದನೆ ಘಟಕ ಸ್ಥಾಪನೆ ಯೋಜನೆಗೆ ₹3 ಕೋಟಿ ಮೀಸಲಿರಿಸಲಾಗಿದೆ.

ಹಾಲು: ಮೆಗಾ ಡೇರಿ
* ಹಾಸನ ಹಾಲು ಒಕ್ಕೂಟದ ಉತ್ಪಾದನೆ ಹೆಚ್ಚಿದ್ದು, ಲಾಭದಾಯಕ ಮಾಡಲು 10 ಲಕ್ಷ ಲೀಟರ್ಗಳಿಂದ 15 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ ಸ್ಥಾಪನೆ.

* ಮೆಗಾ ಡೇರಿ ಸ್ಥಾಪನೆ ಮತ್ತು ಮೂಲ ಸೌಕರ್ಯಕ್ಕೆ ₹50 ಕೋಟಿ ಮೀಸಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.