ನವದೆಹಲಿ:ದೇಶ ಮೊದಲು, ಪ್ರವಾಸ ಮೊಟಕುಗೊಳಿಸದೇ ನಿಮ್ಮ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಬನ್ನಿ ಎಂದು ಅರುಣ್ ಜೇಟ್ಲಿ ಕುಟುಂಬದ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಇನ್ನಿಲ್ಲ

ಶನಿವಾರ ಅರುಣ್ ಜೇಟ್ಲಿ ನಿಧನರಾದ ಹಿನ್ನಲೆಯಲ್ಲಿ ನರೇಂದ್ರ ಮೋದಿ ವಿದೇಶ ಪ್ರವಾಸ ಮೊಟಕುಗೊಳಿಸಿ ಬಾರತಕ್ಕೆ ಮರಳುತ್ತಾರೆ ಎಂಬ ವದಂತಿಗಳು ಹರಡಿದ್ದವು.

ನರೇಂದ್ರ ಮೋದಿಫ್ರಾನ್ಸ್, ಯುಎಇ ಮತ್ತು ಬಹರೇನ್ ದೇಶಗಳ ಪ್ರವಾಸದಲ್ಲಿದ್ದಾರೆ.ಪ್ರಸ್ತುತ ಮೋದಿ ಯುಎಇ ಪ್ರವಾಸದಲ್ಲಿದ್ದು ಅರುಣ್ ಜೇಟ್ಲಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಜೇಟ್ಲಿ ಪತ್ನಿ ಮತ್ತು ಪುತ್ರ ವಿದೇಶ ಪ್ರವಾಸ ಮೊಟಕುಗೊಳಿಸಿ ವಾಪಾಸು ಬರಬೇಡಿ ಎಂದು ಮೋದಿಗೆ ಮನವಿ ಮಾಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಕರ್ನಾಟಕದೊಂದಿಗೆ ಜೇಟ್ಲಿ ನಂಟು

ಶನಿವಾರ ಸಂಜೆ ಬಹರೇನ್ ತಲುಪಿರುವ ಮೋದಿ ಭಾನುವಾರ ಫ್ರಾನ್ಸ್‌ಗೆ ತೆರಳಿ ಜಿ–7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ನರೇಂದ್ರ ಮೋದಿ ನಿಗದಿತ ವೇಳಾಪಟ್ಟಿಯಂತೆ ಸೋಮವಾರ ಸ್ವದೇಶಕ್ಕೆ ಮರಳಲಿದ್ದಾರೆ.

ಭಾನುವಾರ ಮಧ್ಯಾಹ್ನ ಅಥವಾ ಸಂಜೆ ಅರುಣ್ ಜೇಟ್ಲಿ ಅಂತ್ಯಕ್ರಿಯೆ ನಡೆಯಲಿದೆ.ವಿದೇಶ ಪ್ರವಾಸದಲ್ಲಿರುವ ಮೋದಿ ಪ್ರವಾಸ ಮೊಟಕುಗೊಳಿಸಿಅರುಣ್ ಜೇಟ್ಲಿ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವ ಸಾಧ್ಯತೆ ತೀರ ಕಡಿಮೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಮೋದಿ ಹಿಂದಿನ ಶಕ್ತಿಯಾಗಿದ್ದ ಜೇಟ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.