ನವದೆಹಲಿ:ಹೊಸರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ವರದಿಯಲ್ಲಿ 'ತ್ರಿ ಭಾಷ’ ಸೂತ್ರದ ಅನ್ವಯ ಹಿಂದಿಯನ್ನು 8ನೇ ತರಗತಿಯವರೆಗೂ ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದೆ.

ಕೆ.ಕಸ್ತೂರಿರಂಗನ್ ನೇತೃತ್ವದಲ್ಲಿ ’ರಾಷ್ಟ್ರೀಯ ಶಿಕ್ಷಣ ನೀತಿ’ ಸಮಿತಿಯನ್ನು ರಚನೆ ಮಾಡಲಾಗಿತ್ತು. ಈಗಾಗಲೇಸಮಿತಿಯು ತನ್ನ ಕಾರ್ಯವನ್ನು ಪೂರ್ಣಗೊಳಿಸಿದ್ದು ವರದಿಯನ್ನು ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ.

ಪ್ರಸ್ತುತ ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಗೋವಾ ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆಹಿಂದಿ ಭಾಷೆ ಮಾತನಾಡದ ರಾಜ್ಯಗಳ ಶಾಲೆಗಳಲ್ಲಿ ಹಿಂದಿಕಡ್ಡಾಯವಿಲ್ಲ.

ಪ್ರಾಥಮಿ ಶಿಕ್ಷಣವನ್ನು (5ನೇ ತರಗತಿ) ಸ್ಥಳೀಯ ಭಾಷೆಯಲ್ಲಿ ನೀಡುವುದು ಹಾಗೂ ದೇಶದಾದ್ಯಂತ ಗಣಿತ ಮತ್ತು ವಿಜ್ಞಾನ ಪಠ್ಯದಲ್ಲಿ ಏಕರೂಪತೆ ಇರಬೇಕು ಎಂಬ ಅಂಶಗಳು ಹೊಸ ಶಿಕ್ಷಣ ನೀತಿಯಲ್ಲಿ ಇವೆ ಎಂದು ಹೇಳಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿ ಸಿದ್ಧವಾಗಿದ್ದು ಸಮಿತಿಯುಸದ್ಯದಲ್ಲೇ ವರದಿಯನ್ನು ಕೇಂದ್ರ ಸರ್ಕಾರಕ್ಕೆಹಸ್ತಾಂತರಿಸಲಿದೆಎಂದುಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ಶಿಕ್ಷಣದಲ್ಲಿ ದೂರದೃಷ್ಟಿಯನ್ನು ಇಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕರಡು ನೀತಿಯು ಗ್ರಾಹ್ಯತೆ, ಲಭ್ಯತೆ, ಗುಣಮಟ್ಟ, ನ್ಯಾಯೋಚಿತ ಹಾಗೂ ಹೊಣೆಗಾರಿಕೆ ಎಂಬ ಐದು ಆಧಾರಸ್ತಂಭಗಳ ಮೇಲೆ ನಿಂತಿದೆ. 1968ರಲ್ಲಿ ಇಂದಿರಾಗಾಂದಿ ಅವರ ಅವಧಿಯಲ್ಲಿ ಮೊದಲ ಶಿಕ್ಷಣ ನೀತಿಯನ್ನು ಘೋಷಿಸಲಾಗಿತ್ತು. 1986ರಲ್ಲಿ ರಾಜೀವ್‌ಗಾಂಧಿ ಅವರ ಅವಧಿಯಲ್ಲಿ ಎರಡನೇ ನೀತಿ ಜಾರಿಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.