ನವದೆಹಲಿ: ಫ್ರಾನ್ಸ್‌ನ ಡಾಸೋ ಏವಿಯೇಷನ್ ಕಂಪನಿ ನಿರ್ಮಿತ ಮೊದಲ ರಫೇಲ್ ಯುದ್ಧ ವಿಮಾನ ದೇಶದ ರಕ್ಷಣಾ ವ್ಯವಸ್ಥೆಗೆ ಸೇರ್ಪಡೆಯಾಗಿರುವುದರಿಂದ ಭಾರತೀಯ ವಾಯುಪಡೆಗೆ ಭೀಮಬಲ ಬಂದಂತಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಫ್ರಾನ್ಸ್‌ನಲ್ಲಿ ರಫೇಲ್ ಯುದ್ಧವಿಮಾನವನ್ನು ಅಧಿಕೃತವಾಗಿ ಪಡೆದುಕೊಂಡರು. ನಂತರರಫೇಲ್ ವಿಮಾನಕ್ಕೆ ‘ಆಯುಧಪೂಜೆ’ ನೆರವೇರಿಸಿ ‘ಓಂ’ ಎಂದು ಬರೆದರು.

ಇದನ್ನೂ ಓದಿ:ಸುದೀರ್ಘ ಕಥನ: ‘ರಫೇಲ್ ಡೀಲ್’ ನಿಮ್ಮ ಮನದಲ್ಲಿರುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

₹56 ಸಾವಿರ ಕೋಟಿ ಮೊತ್ತದ 36 ರಫೇಲ್ ಯುದ್ಧವಿಮಾನಗಳನ್ನು ಪಡೆಯಲು 2016ರಲ್ಲಿ ಒಪ್ಪಂದ ಏರ್ಪಟ್ಟಿತ್ತು. ಮೇ 2020ಕ್ಕೆ 4 ರಫೇಲ್ ವಿಮಾನಗಳು ಭಾರತಕ್ಕೆ ಬರಲಿವೆ.

ಫ್ರಾನ್ಸ್ ದೇಶದ ಡಸಲ್ಟ್ (Dassault) ಕಂಪನಿಯು ಎರಡು ಎಂಜಿನ್‌ನ ಸಾಮರ್ಥ್ಯದ ಯುದ್ಧ ವಿಮಾನಗಳನ್ನು ತಯಾರಿಸುತ್ತಿದ್ದು ಈ ವಿಮಾನಕ್ಕೆ ರಪೇಲ್ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ:ರಫೇಲ್ ಸರ್ಕಾರ–ಸರ್ಕಾರಗಳ ನಡುವಣ ಒಪ್ಪಂದ

ಆಕಾಶದಲ್ಲಿ ಹಾರುತ್ತಿರುವಾಗಲೇ ಎದುರಾಳಿ ವಿಮಾನಗಳಿಗೆ ಬಾಂಬ್ ಎಸೆಯುವ (ಏರ್ ಟು ಏರ್), ಆಕಾಶದಿಂದ ಭೂಮಿಯ ಮೇಲಿರುವ ಗುರಿಗೆ ಬಾಂಬ್ ಹಾಕುವ (ಏರ್ ಟು ಅರ್ತ್),ಭಾರತದ ವೈವಿಧ್ಯಮಯ ಹವಾಮಾನದಲ್ಲಿ ಕಾರ್ಯನಿರ್ವಹಿಸಬಲ್ಲ, ಕಣ್ಣಿಗೆ ಕಾಣಿಸದಷ್ಟು ದೂರದಿಂದ ದಾಳಿ ನಡೆಸಬಲ್ಲ (ಸ್ಟಾಂಡ್‌ಆಫ್ ಸಾಮರ್ಥ್ಯ) ವೈಶಿಷ್ಟ್ಯತೆಗಳನ್ನು ಹೊಂದಿರುವುದರಿಂದ ರೆಫೇಲ್ ಯುದ್ಧ ವಿಮಾನ ಕಂಡು ಭಾರತದ ಶತ್ರು ದೇಶಗಳಬೆಚ್ಚಿ ಬಿದ್ದಿವೆ!

ರಫೇಲ್‌ನ ವಿಶೇಷತೆಗಳು

*ಶತ್ರುವಿನ ಹಲವು ಗುರಿಗಳನ್ನು ಏಕಕಾಲದಲ್ಲಿ ನಾಶಪಡಿಸುವ ಸಾಮರ್ಥ್ಯ

*ಒಂದು ರಫೇಲ್ ಎದುರಿಸಲು ವೈರಿಪಡೆಯು ಹಲವು ಯುದ್ಧವಿಮಾನಗಳನ್ನು ನಿಯೋಜಿಸಬೇಕು

*ಈಗ, ಪಾಕಿಸ್ತಾನದ ಒಂದು ಎಫ್–16 ಯುದ್ಧವಿಮಾನ ಎದುರಿಸಲು ಭಾರತವು 2 ಸುಖೋಯ್ ವಿಮಾನ ನಿಯೋಜಿಸಬೇಕಾಗುತ್ತದೆ. ಮುಂದೆ, ಭಾರತದ ಒಂದು ರಫೇಲ್‌ಗೆ ಪಾಕಿಸ್ತಾನವು ಎರಡು ಎಫ್–16 ನಿಯೋಜಿಸಬೇಕಾಗುತ್ತದೆ

*ಅಣ್ವಸ್ತ್ರ ಸಿಡಿತಲೆ ಇರುವ ಕ್ಷಿಪಣಿಗಳನ್ನು ಉಡ್ಡಯನ ಮಾಡುವ ಸಾಮರ್ಥ್ಯ

*ಮುಂದಿನ ತಲೆಮಾರಿನ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಅಳವಡಿಸಲು ಚಿಂತನೆ

*ಅಂಬಾಲ ಹಾಗೂ ಪಶ್ಚಿಮ ಬಂಗಾಳದ ಹಾಶಿಮಾರಾದಲ್ಲಿ ರಫೇಲ್ ನಿಯೋಜಿಸಲು ಸಿದ್ಧತೆ

ಇವನ್ನೂ ಓದಿ

ರಫೇಲ್ ಖರೀದಿ ಅತಿ ದೊಡ್ಡ ಹಗರಣ

ಮುನ್ನೆಲೆಗೆ ಬಂತು ಬೆಂಗಳೂರು ನಂಟು, ದಿನಕ್ಕೊಂದು ತಿರುವು

ರಫೇಲ್ಸ್ವಾಗತಕ್ಕೆ ವಾಯುಪಡೆಸದ್ದಿಲ್ಲದೆ ಸಿದ್ಧತೆ

ವಿಮಾನ ಖರೀದಿಸದಿದ್ದರೆ ವಾಯುಪಡೆ ಶಕ್ತಿ ಕುಗ್ಗಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.