ಕೋಲ್ಕತ್ತ: ಸಿಬಿಐ ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳದ ತೃಣಮೂಲಕಾಂಗ್ರೆಸ್ ವ್ಯಾಪಕ ಪ್ರತಿಭಟನೆಗೆ ಮುಂದಾಗಿದೆ.

ಕೇಂದ್ರ ಸರ್ಕಾರ ವಿವಿಧ ಕೇಂದ್ರೀಯ ಸಂಸ್ಥೆಗಳ ಮೂಲಕ ತನಿಖೆ ಹೆಸರಲ್ಲಿ ನಡೆಸುತ್ತಿರುವ ಕಾರ್ಯಗಳ ವಿರುದ್ಧ ರಾಜ್ಯದ ಜನರು ಎಲ್ಲರೂ ಒಂದಾಗಬೇಕು ಎಂದು ಟಿಎಂಸಿ ಜಿಲ್ಲಾ ಅಧ್ಯಕ್ಷ ಕರೆ ನೀಡಿದ್ದಾರೆ.

ಸಿಬಿಐ ನಡೆ ವಿರೋಧಿಸಿ ಮಂಗಳವಾರ ಪ್ರತಿ ಜಿಲ್ಲೆಗಳಲ್ಲಿಯೂ ಧಿಕ್ಕಾರ್ ರ‍್ಯಾಲಿ ನಡೆಸಲಾಗುವುದು. ಮೋದಿಗೆ ಹುಚ್ಚು ಹಿಡಿದಿದೆ.ಅವರ ಕಾಲಾವಧಿ ಮುಗಿಯುತ್ತಾ ಬಂದಿದೆ ಎಂದು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇದನ್ನೂ ಓದಿ:ಟಿಎಂಸಿ ಕಾರ್ಯಕರ್ತರಿಂದ ಪ್ರಧಾನಿ ಪ್ರತಿಕೃತಿ ದಹನ

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಡಳಿತ ಹೇರುವ ಸಾಧ್ಯತೆ ಇದೆ ಎಂಬ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ ಮಮತಾ, ಅವರು ಏನು ಮಾಡಬೇಕೆಂದು ಬಯಸುತ್ತಿದ್ದಾರೋ ಅದನ್ನೊಮ್ಮೆ ಮಾಡಿ ತೋರಿಸಲಿ, ನಮಗೇನೂ ಭಯವಿಲ್ಲ.ರಾಷ್ಟ್ರಪತಿ ಆಡಳಿತ ಹೇರಿಕೆ ಮಾಡಲಿ ನೋಡೋಣ. ಪ್ರಜಾಪ್ರಭುತ್ವದ ವಿರುದ್ಧ,ದೌರ್ಜನ್ಯಗಳ ವಿರುದ್ಧ ನಮ್ಮ ರಾಜ್ಯ ಪ್ರತಿಭಟಿಸಿ ನಿಂತಿರುವ ಇತಿಹಾಸಬಂಗಾಳಕ್ಕಿದೆಎಂದಿದ್ದಾರೆ.

ಕೇಂದ್ರದಲ್ಲಿರುವ ಸರ್ಕಾರವನ್ನು ಆದಷ್ಟು ಬೇಗನೆ ಕಿತ್ತೊಗೆಯಬೇಕಾದ ಅಗತ್ಯವಿದೆ. ಇಲ್ಲವಾದಲ್ಲಿ ನಮ್ಮ ದೇಶ ಸರ್ವ ನಾಶವಾಗುತ್ತದೆ. ಈ ಯುದ್ಧ ಕೊನೆಗಾಣಬೇಕಿದೆ ಎಂದು ಮೆಟ್ರೊ ಚಾನೆಲ್‍ನಲ್ಲಿ ಧರಣಿ ಕುಳಿತಿರುವ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.