ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆಂಧ್ರ ಪ್ರದೇಶದ ಗುಂಟೂರ್‌ಗೆ ಭೇಟಿ ನೀಡುವ ಮುನ್ನ, ಮೋದಿಗೆ ಪ್ರವೇಶವಿಲ್ಲ ಎಂಬ ಬೃಹತ್ ಫಲಕವೊಂದರ ಮೂಲಕ ಮೋದಿ ಭೇಟಿಗೆ ವಿರೋಧ ವ್ಯಕ್ತವಾಗಿದೆ.

ಶನಿವಾರ ಗುಂಟೂರ್ ಮತ್ತು ವಿಜಯವಾಡದಲ್ಲಿ ಬೃಹತ್ ಜಾಹೀರಾತು ಫಲಕಗಳಲ್ಲಿ "Modi No Entry" "Modi Never Again" ಎಂದು ಬರೆಯಲಾಗಿದ್ದು, ರಾಜ್ಯ ಬಿಜೆಪಿ ಇದರ ವಿರುದ್ಧ ಕಿಡಿ ಕಾರಿದೆ.

ಈ ರೀತಿ ಫಲಕ ಸ್ಥಾಪಿಸಿದ್ದು ಯಾರು ಎಂಬುದರ ಬಗ್ಗೆ ಯಾವುದೇ ಪಕ್ಷ ಹೊಣೆ ಹೊತ್ತಿಲ್ಲ.ಆದರೆ ಈ ಹಿಂದೆ ತೆಲುಗು ದೇಶಂ ಪಾರ್ಟಿ ಜಾಹೀರಾತು ಇದ್ದ ಫಲಕದಲ್ಲಿಯೇ ಮೋದಿ ವಿರೋಧಿ ಘೋಷಣೆ ಕಂಡು ಬಂದಿದ್ದರಿಂದು ಇದು ತೆಲುಗು ದೇಶಂ ಪಾರ್ಟಿಯ ಕೆಲಸ ಆಗಿರಬಹುದು ಎಂದು ಶಂಕಿಸಲಾಗಿದೆ.

ಆದಾಗ್ಯೂ, ಈ ಫಲಕದ ಮೂಲಕ ಐದು ಕೋಟಿ ಆಂಧ್ರದ ಜನರ ಪ್ರತಿಭಟನೆ ಕಾಣಿಸುತ್ತಿದೆ ಎಂದು ಟಿಡಿಪಿ ರಾಷ್ಟ್ರೀಯ ವಕ್ತಾರ ದಿನಕರ್ ಲಂಕಾ ಹೇಳಿದ್ದಾರೆ.ಅದೇ ವೇಳೆ ಫಲಕ ಸ್ಥಾಪಿಸಿದ್ದು ಟಿಡಿಪಿ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ.

ಪ್ರಧಾನಿ ವಿರುದ್ಧವಿರುವ ಫಲಕಗಳು ಸ್ಥಾಪಿಸಿರುವ ಬಗ್ಗೆ ಬಿಜೆಪಿ ರಾಜ್ಯ ಮುಖಂಡರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಧಾನಿಯನ್ನು ಅವಹೇಳನ ಮಾಡಿದ ಫಲಕಗಳನ್ನು ತೆರವು ಮಾಡಿ, ಫಲಕ ಸ್ಥಾಪಿಸಿದವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.