ನವದೆಹಲಿ: ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ತಡೆಯುವುದಕ್ಕಾಗಿರುವ ಸಲಹಾಸೂತ್ರ ಸಿದ್ಧಪಡಿಸಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಮೂರು ವಾರಗಳ ಗಡುವು ನೀಡಿದೆ.

ತಂತ್ರಜ್ಞಾನವು ಇದೀಗ ಅಪಾಯಕಾರಿಯಾಗಿ ಮಾರ್ಪಟ್ಟಿದೆ ಎಂದು ಹೇಳಿದ ನ್ಯಾಯಮೂರ್ತಿ ದೀಪಕ್ ಗುಪ್ತಾ ಮತ್ತು ಅನಿರುದ್ಧ್ ಬೋಸ್ ಅವರ ನ್ಯಾಯಪೀಠವು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವೊಂದು ವಿಷಯ/ ಸಂದೇಶಗಳ ಮೂಲ ಯಾವುದು ಎಂಬುದು ಪತ್ತೆ ಹಚ್ಚುವುದು ಕಷ್ಟ . ಹಾಗಾಗಿ ಕೇಂದ್ರ ಸರ್ಕಾರ ಇದನ್ನು ತಡೆಯಲು ಈಗಲೇ ಕಾರ್ಯ ಪ್ರವೃತ್ತವಾಗಬೇಕು ಎಂದಿದೆ.

ಇದನ್ನೂ ಓದಿ:ಸಾಮಾಜಿಕ ಜಾಲತಾಣಕ್ಕೆ ಆಧಾರ್

ಈ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಸರಿಯಾದ ಸಲಹಾಸೂತ್ರಗಳನ್ನು ರಚಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಆನ್ಲೈನ್ ಅಪರಾಧದ ಮೂಲವನ್ನು ಪತ್ತೆ ಹಚ್ಚಲು ನಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿ ನುಣುಚಿಕೊಳ್ಳುವಂತಿಲ್ಲ. ತಂತ್ರಜ್ಞಾನದ ಮೂಲಕ ಈ ರೀತಿಯ ಅಪರಾಧಗಳು ಹುಟ್ಟುಕೊಳ್ಳುತ್ತವೆ ಎಂಬುದಾದರೆ ಅದನ್ನು ನಿಲ್ಲಿಸುವ ವ್ಯವಸ್ಥೆಯೂ ತಂತ್ರಜ್ಞಾನದಲ್ಲಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ:ಜಾಲತಾಣಕ್ಕೆ ಆಧಾರ್: ಶೀಘ್ರ ನಿರ್ಧಾರ ಅಗತ್ಯ– ಸುಪ್ರೀಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.