ನವದೆಹಲಿ: ಲಾಕ್‌ಡೌನ್ ಮುಗಿದ ನಂತರ ಆರು ತಿಂಗಳುಗಳವರೆಗೆ ಸಾರ್ವಜನಿಕ ಸಾರಿಗೆ ಬಳಕೆ ಕಡಿಮೆಯಾಗುವ ಸಾಧ್ಯತೆ ಇದೆ ಮತ್ತು ಆರೋಗ್ಯದ ಕಾಳಜಿಯೇ ಜನರ ಆದ್ಯತೆ ಆಗಲಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಹೇಳಿದೆ.

ದೆಹಲಿಯಲ್ಲಿನ ಮಧ್ಯಮ ಮತ್ತು ಅಧಿಕ ವೇತನ ವರ್ಗದ 400ಕ್ಕಿಂತಲೂ ಹೆಚ್ಚು ಕುಟುಂಬಗಳನ್ನು ಸಮೀಕ್ಷೆ ನಡೆಸಿದ ಸಿಎಸ್‌ಇ ಜಾಗತಿಕ ಪಿಡುಗಿನ ನಂತರ ಜನರ ಸಂಚಾರ ಆಯ್ಕೆಗಳು ಬದಲಾಗಲಿವೆ ಎಂದಿದೆ.

ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಂಪರ್ಕ ಸಾರಿಗೆ ಬಳಕೆ ಕಡಿಮೆಯಾಗುವ ಸಾಧ್ಯತೆ ಇದೆ . ಅದೇ ವೇಳೆ ಉನ್ನತ ಗುಣಮಟ್ಟದ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯನ್ನು ಬಯಸುತ್ತಾರೆ. ಇನ್ನೊಬ್ಬರ ಸಂಪರ್ಕಕ್ಕೆ ಬರದಂತೆ ನಡೆಯುವುದು, ಸೈಕ್ಲಿಂಗ್, ಜೀವನ ಶೈಲಿಯಲ್ಲಿನ ಬದಲಾವಣೆ , ಅನಗತ್ಯ ಓಡಾಟಗಳನ್ನು ಜನರು ಸಾಧ್ಯವಾದಷ್ಟು ಕಡಿಮೆ ಮಾಡಲಿದ್ದಾರೆ ಎಂದು ಪರಿಸರ ನೀತಿಯ ಚಿಂತಕರ ಚಾವಡಿ ಅಭಿಪ್ರಾಯಪಟ್ಟಿದೆ.

ಲಾಕ್‌ಡೌನ್ ನಂತರ ಆರೋಗ್ಯ ಸುರಕ್ಷೆ ಬಗ್ಗೆ ಜನರು ಹೆಚ್ಚಿನ ಪ್ರಾಮುಖ್ಯತೆ ನೀಡಲಿದ್ದಾರೆ. ರಸ್ತೆ ಸಂಚಾರ ಸುರಕ್ಷೆ, ಸಂಚಾರದ ಆಯ್ಕೆ, ಯಾವುದು ಆರಾಮದಾಯಕ ಎಂಬುದರ ಬಗ್ಗೆ, ಪ್ರಯಾಣದ ದೂರ, ಪ್ರಯಾಣದ ಖರ್ಚು, ಪರಿಸರದ ಪ್ರಜ್ಞೆ ಮೊದಲಾದವುಗಳಿಗೆ ಜನರು ಆದ್ಯತೆ ನೀಡಲಿದ್ದಾರೆ.

ಶೇ.36ರಷ್ಚು ಜನರಲ್ಲಿ ಸ್ವಂತ ವಾಹನವಿಲ್ಲ. ಅದೇ ವೇಳೆ ಶೇ.28ರಷ್ಟು ಮಂದಿ ಸುರಕ್ಷೆಯನ್ನು ಮನಗಂಡು ಸ್ವಂತ ವಾಹನ ಖರೀದಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್ ಮುಗಿದು 6 ತಿಂಗಳೊಳಗೆ ಮೆಟ್ರೊ ಪ್ರಯಾಣಿಕರ ಸಂಖ್ಯೆ ಶೇ.37ರಷ್ಚು ಕುಸಿಯಲಿದೆ. ಆದರೆ ಕಾರು ಮತ್ತು ದ್ವಿಚಕ್ರ ವಾಹನಗಳ ಸಂಖ್ಯೆಯು ಶೇ.28ರಿಂದ 38ಕ್ಕೆ ಏರಿಕೆಯಾಗಲಿದೆ. ಇದರ ಜತೆಗೆ ಕಾಲ್ನಡಿಗೆ, ಸೈಕ್ಲಿಂಗ್ ಶೇ.4ರಿಂದ 12ರಷ್ಟು ಏರಿಕೆಯಾಗಲಿದೆ.

ಸಾರ್ವಜನಿಕ ಸಾರಿಗೆಗಳು ಉನ್ನತ ಗುಣಮಟ್ಟದ್ದಾಗಿದ್ದರೆ ಅದರಲ್ಲಿ ಪ್ರಯಾಣಿಸುವುದಾಗಿ ಶೇ.73ರಷ್ಟು ಅಭಿಪ್ರಾಯಪಟ್ಟಿದ್ದಾರೆ. ಸುಮಾರು ಶೇ.22ರಷ್ಟು ಮಂದಿ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲಿದ್ದು ಇನ್ನುಳಿದವರು ಕ್ಯಾಬ್ ಅಥವಾ ಇನ್ನಿತರ ವಾಹನಗಳನ್ನು ಬಳಸಲಿದ್ದಾರೆ.

ಸಂಪರ್ಕ ದೃಷ್ಟಿಯಿಂದ ಶೇ.38ರಷ್ಟು ಜನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮೆಚ್ಚಿದ್ದು ಶೇ.23ರಷ್ಟು ಜನ ಪ್ರಯಾಣದ ಖರ್ಚು ಉಳಿಸಲು, ಶೇ.16 ಮಂದಿ ಟ್ರಾಫಿಕ್‌ನಿಂದ ಮುಕ್ತಿಪಡೆಯಲು ಈ ಸಂಪರ್ಕ ವ್ಯವಸ್ಥೆಯನ್ನು ಇಷ್ಟಪಟ್ಟಿದ್ದಾರೆ.

ದೆಹಲಿಯಲ್ಲಿ 5,400 ಬಸ್‌ಗಳಿದ್ದು ಪ್ರತಿದಿನ ಕಿಮೀಗೆ 741.6 ಲಕ್ಷ ಜನರಿಗೆ ಸೇವೆ ನೀಡುತ್ತದೆ. ಬಸ್ಸಿನಲ್ಲಿ ಅಂತರ ಕಾಪಾಡುವುದರಿಂದ (ಒಂದು ಬಸ್ಸಿನಲ್ಲಿ 20 ಜನ) ಬಸ್ಸಿನ ಸೇವಾ ಸಾಮರ್ಥ್ಯವು ಪ್ರತಿದಿನ ಕಿಮೀಗೆ 211.9 ಲಕ್ಷ ಆಗಿ ಕಡಿತಗೊಂಡಿದೆ. ಹಾಗಾಗಿ ದೆಹಲಿಯಲ್ಲಿ ಮುಂಬರುವ ದಿನಗಳಲ್ಲಿ 1,243 ಹೆಚ್ಚುವರಿ ಬಸ್‌ಗಳ ಅಗತ್ಯವಿದೆ ಎಂದು ಸಿಎಸ್ಇ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.