ಬೆಂಗಳೂರು: ಅರ್ಜುನ್ ಸರ್ಜಾ ಹೊಟೇಲ್ ಮತ್ತು ರೆಸಾರ್ಟ್‌ಗೆ ಕರೆದಿದ್ದರು ನಾನು ಅವರಿಗೆ ಇಲ್ಲ ಎಂದು ನೇರವಾಗಿ ಹೇಳಿದ್ದೆ ಎಂದು ನಟಿ ಶ್ರುತಿ ಹರಿಹರನ್ ತಿಳಿಸಿದರು.

ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ #metoo ಆರೋಪ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರುತಿ ಹರಿಹರನ್ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಈಗಾಗಲೇ ನಾನು ಪತ್ರದ ಮೂಲಕ ಎಲ್ಲವನ್ನೂ ಹೆಳಿದ್ದೇನೆ ಈಗ ಹೇಳುವುದು ಏನು ಇಲ್ಲ ಎಂದು ಪತ್ರಕರ್ತರಿಗೆ ಪ್ರಶ್ನೆಗಳನ್ನು ಕೇಳಲು ಅನುವು ಮಾಡಿಕೊಟ್ಟರು.

ಈ ಕಿರುಕುಳವನ್ನು ಬಹಿರಂಗಪಡಿಸಲು ನನಗೆ ಆಗ ಧೈರ್ಯ ಇರಲಿಲ್ಲ, ಫೈರ್ ಸಂಸ್ಥೆ ಈಗ ನನ್ನ ಬೆನ್ನಿಗೆ ನಿಂತಿರುವುದರಿಂದ ನಾನು ಇಂದು ಧೈರ್ಯವಾಗಿ ಹೇಳುತ್ತಿದ್ದೆನೆ. ನನ್ನ ಈ ನಡೆ ನೊಂದಿರುವ ತುಂಬಾ ಜನ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿದೆ.

ನಾನು ದೊಡ್ಡ, ದೊಡ್ಡ ಸ್ಟಾರ್ ನಟರ ಜೊತೆ ಕೆಲಸ ಮಾಡಿದ್ದೇನೆ, ಆದರೆ ಇಂತಹ ಅನುಭವಗಳು ನನಗೆ ಆಗಿರಲಿಲ್ಲ, ಅವರ ಸ್ಪರ್ಶ ಕಿರುಕುಳದಂತಿತ್ತು ಎಂದರು. ನಾನು ಪ್ರಚಾರಕ್ಕಾಗಿ #Metoo ಪತ್ರ ಬರೆದಿಲ್ಲ ಎಂದರು.

ಕಾನೂನು ಹೋರಾಟ ನಡೆಸಬೇಕಾಗಿರುವುದರಿಂದ ಸಾಕ್ಷ್ಯಗಳನ್ನು ಈಗ ಬಹಿರಂಗ ಪಡಿಸಲು ಸಾಧ್ಯವಿಲ್ಲ, ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವೆ ಎಂದು ಅವರು ಹೇಳಿದರು.

ಸಾರ್ವಜನಿಕವಾಗಿ ಕ್ಷಮೆ ಕೋರಿದರೆ ನನಗೆ ನ್ಯಾಯ ಸಿಗಬಹುದು. ಆದರೆ ಅದಕ್ಕಿಂತ ದೊಡ್ಡದಾಗಿ ಅವರಿಗೆ ಇದು ಒಂದು ಪಾಠವಾಗಬೇಕು.ನಾನು ಮಾಧ್ಯಮದವರಲ್ಲಿ ಕೇಳಿಕೊಳ್ಳುವುದೆನೆಂದರೆ ದಯಮಾಡಿ ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿ, ನಿಮ್ಮ ನಡೆ ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡುವ ರೀತಿಯಲ್ಲಿರಬೇಕು ಎಂದರು.

ಶ್ರುತಿ ಹರಿಹರನ್ ಪತ್ರಿಕಾಗೋಷ್ಠಿಗೂ ಮುಂಚೆ ನಟ ಚೇತನ್ ಫೈರ್(ಫಿಲಂ ಇಂಡಸ್ಟ್ರಿ ಫಾರ್ ಇಕ್ವಾಲಿಟಿ ಆ್ಯಂಡ್ ರೈಟ್ಸ್) ಸಂಸ್ಥೆಯನ್ನು ಹುಟ್ಟು ಹಾಕಿದ ಬಗ್ಗೆ ಮಾಹಿತಿ ನೀಡಿದರು. ಈ ಸಂಸ್ಥೆಯು ಚಿತ್ರರಂಗದಲ್ಲಿ ನಡೆಯುವ ಲಿಂಗತಾರತಮ್ಯ ಮತ್ತು ಲೈಂಗಿಕ ಕಿರುಕುಳ ತಡೆಗಾಗಿ ಕೆಲಸ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಇವನ್ನೂ ಓದಿ:

ಶ್ರುತಿ ಹರಿಹರನ್ #MeToo ಪತ್ರ: ಸಮಯ ಈಗ ಬಂದಿದೆ!

ಸ್ಯಾಂಡಲ್ವುಡ್ #MeToo: ಶ್ರುತಿ ಹರಿಹರನ್ಗೆ ಹಲವೆಡೆಯಿಂದ ಬೆಂಬಲ

ಅರ್ಜುನ್ಕ್ಷಮೆ ಕೇಳುವುದು ದೊಡ್ಡತನ,ನಾನು ಶ್ರುತಿ ಹರಿಹರನ್ ಪರ:ಪ್ರಕಾಶ್ ರೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.