ಸಂಸ್ಕೃತಿ ಸಂಭ್ರಮ | ವಿಚಾರದ ಸಂಸ್ಕೃತಿಯಲ್ಲಿ ಜೀವನಮೌಲ್ಯ
ಪ್ರಕೃತಿ ಹೇಗೆ ಕೆಲವು ನಿಯಮಗಳನ್ನು ಅನುಸರಿಸಿ ಸಾಗುವುದೋ ಹಾಗೆಯೇ ನಮ್ಮ ಆಲೋಚನೆಯೂ ಕೆಲವು ನಿಯಮಗಳಿಗೆ ಒಳಪಟ್ಟಿದೆ. ನಾವು ಸಾಮಾನ್ಯವಾಗಿ ’ಅವರು ತಮ್ಮ ವಿಚಾರಶಕ್ತಿಯನ್ನು ಕಳೆದುಕೊಂಡಿದ್ದಾರೆ, ಅತಾರ್ಕಿಕವಾಗಿ ಮಾತನಾಡುತ್ತಿದ್ದಾರೆ‘ ಎಂದೆಲ್ಲ ಹೇಳುತ್ತೇವೆ; ಆದರೆ ವಿಚಾರವನ್ನು, ತರ್ಕವನ್ನು ಮೀರಿ ಆಲೋಚಿಸುವುದು ನಿಜವಾಗಿಯೂ ಸಾಧ್ಯವೇ ಇಲ್ಲ. ಅತಾರ್ಕಿಕವಾದದ್ದು ಎಂದರೆ ತರ್ಕವನ್ನು ಮೀರಿದ್ದು ಎಂದು ಅರ್ಥವಲ್ಲ; ಬದಲಾಗಿ ತಾರ್ಕಿಕ ನಿಯಮಗಳಲ್ಲಿ ಅಥವಾ ತಾರ್ಕಿಕ ಪ್ರಕ್ರಿಯೆಗಳಲ್ಲಿ ಲೋಪಗಳು ಉಂಟಾಗಿವೆ ಎಂದಷ್ಟೇ ಅರ್ಥ.Last Updated 13 ಮೇ 2020, 19:45 IST