ಕಮರುತ್ತಿದೆ ‘ಏಲಕ್ಕಿ’ ಘಮಲು: ಸೂಕ್ತ ಬೆಲೆ ಸಿಗದೆ ಬೆಳೆಗಾರರ ಪರದಾಟ
ಬೆಂಗಳೂರು: ಸಂಬಾರ ಪದಾರ್ಥಗಳ ‘ರಾಣಿ’ ಎಂದು ಗುರುತಿಸಿಕೊಂಡಿರುವ ಏಲಕ್ಕಿ ಬೆಳೆಯು ಕಾರ್ಮಿಕರ ಕೊರತೆ, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಇರುವುದು, ಸೂಕ್ತ ಬೆಲೆ ಸಿಗದ ಕಾರಣಗಳಿಂದಾಗಿ ರಾಜ್ಯದಿಂದ ನಿಧಾನವಾಗಿ ಕಣ್ಮರೆ ಆಗುತ್ತಿದೆ. ಹವಾಮಾನ ಬದಲಾವಣೆ ಹಾಗೂ ಕಟ್ಟೆ ರೋಗದಂತಹ ಸಮಸ್ಯೆಗಳು ಸಹ ಏಲಕ್ಕಿ ಬೆಳೆಯಲು ಬೆಳೆಗಾರರಲ್ಲಿ ನಿರಾಸಕ್ತಿ ಮೂಡಿಸುತ್ತಿವೆ.Last Updated 18 ಫೆಬ್ರುವರಿ 2023, 21:30 IST