ಹಾವೇರಿ: ‘ದೇಶ–ವಿದೇಶಗಳಲ್ಲಿ ಪ್ರಸಿದ್ಧ ಪಡೆದಿರುವ ಹಾವೇರಿಯ ಏಲಕ್ಕಿ ಮಾಲೆ, ಈ ಬಾರಿ ಪುಟ್ಟಪರ್ತಿಯಲ್ಲೂ ಕಂಪು ಬೀರಲಿದೆ. ನ.23ರಂದು ಆಂಧ್ರಪ್ರದೇಶದಲ್ಲಿ ನಡೆಯಲಿರುವ ಸತ್ಯಸಾಯಿ ಬಾಬಾರವರ 95ನೇ ಜಯಂತಿ ಕಾರ್ಯಕ್ರಮಕ್ಕೆ ಹಾವೇರಿಯಿಂದ ಏಲಕ್ಕಿ ಮಾಲೆಗಳನ್ನು ನೀಡಲಿದ್ದೇವೆ’ ಎಂದುಸತ್ಯಸಾಯಿ ಸಮಿತಿಯ ಸದಸ್ಯ ಬಾಬಣ್ಣ ಕೋರಿ ತಿಳಿಸಿದ್ದಾರೆ.

‘ಸಮಿತಿಯಿಂದ ಸುಮಾರು ₹30 ಸಾವಿರ ಮೌಲ್ಯದ 12 ಅಡಿ ಮತ್ತು 6 ಅಡಿ ಎತ್ತರದ ಬೃಹತ್ ಏಲಕ್ಕಿ ಹಾರಗಳನ್ನು ತಯಾರಿಸಲಾಗುತ್ತಿದೆ. ಸಮಿತಿಯಿಂದ ಹಾರಗಳಿಗೆ ತಗುಲುವ ಖರ್ಚನ್ನು ಮಾತ್ರ ಭರಿಸಲಾಗಿದೆ.ನಗರದ ಸಿದ್ದೇದೇವಪುರದ ಏಲಕ್ಕಿ ಮಾಲೆ ತಯಾರಕ ಸಂಜೀವಯ್ಯ ಅಂದಾನಿಮಠ ಅವರು ಯಾವುದೇ ಕೂಲಿ ಪಡೆಯದೆ ಉಚಿತವಾಗಿ ಮಾಲೆಗಳನ್ನು ತಯಾರಿಸಿಕೊಡಲು ಸ್ವಪ್ರೇರಣೆಯಿಂದ ಮುಂದಾಗಿದ್ದಾರೆ’ ಎಂದು ಹೇಳಿದ್ದಾರೆ.

‘ಈ ಬಾರಿ ಸತ್ಯಸಾಯಿ ಬಾಬಾರವರ ಸಮಾಧಿಗೆ ಏಲಕ್ಕಿ ಹಾರಗಳನ್ನು ಸಮರ್ಪಿಸಲು ಸಮಿತಿಗೆ ಅವಕಾಶ ಸಿಕ್ಕಿರುವುದು ಹಾಗೂ ಭಕ್ತರ ಸಹಕಾರ ದೊರೆತಿರುವುದು ಎಲ್ಲವೂ ಬಾಬಾನ ಕೃಪೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.