ಕೋವಿಡ್ ಲಸಿಕೆ ನೋಂದಣಿ ಹೆಸರಲ್ಲಿ ಆಧಾರ್, ಒಟಿಪಿ ಕೇಳುವ ವಂಚಕರ ಬಗ್ಗೆ ಎಚ್ಚರವಿರಲಿ
ಕೋವಿಡ್-19 ಕಾಡದಂತೆ ತಡೆಯುವ ಲಸಿಕೆ ಸಿದ್ಧವಾಗುತ್ತಿರುವ ಹೊತ್ತಿನಲ್ಲೇ ಅಂತರರಾಷ್ಟ್ರೀಯ ಪೊಲೀಸ್ ಜಾಲವಾಗಿರುವ ಇಂಟರ್‌ಪೋಲ್, ಈ ಕುರಿತ ಸುಳ್ಳು ಜಾಹೀರಾತು, ಲಸಿಕೆ ಕಳವು, ನಕಲಿ ಲಸಿಕೆ ಮುಂತಾದವುಗಳ ತಡೆಗೆ ತನ್ನ 194 ಸದಸ್ಯ ರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿತ್ತು. ಕೋವಿಡ್-19 ಪೀಡಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಕಲಿ ಚಿತ್ರ ತೋರಿಸಿ, ನೆರವು ನೀಡುವಂತೆ ಮನವಿ ಮಾಡುವ ವಂಚಕರೂ ಇರುತ್ತಾರೆ. ಈ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ. ಸುಶಿಕ್ಷಿತರೇ ಈ ಪರಿಯ ವಂಚನೆಗೆ ಬಲಿಯಾಗುತ್ತಿರುವ ಹಂತದಲ್ಲಿ, ನಮ್ಮ ಊರಲ್ಲಿರುವ ಮುಗ್ಧರಿಗೆ, ವಿಶೇಷವಾಗಿ ವಯೋವೃದ್ಧರಿಗೆ ಈ ಕುರಿತು ಅರಿವು ಮೂಡಿಸುವ ಕರ್ತವ್ಯ ನಮ್ಮೆಲ್ಲರದು. ಅಪರಿಚಿತರೊಂದಿಗೆ ಆಧಾರ್, ಒಟಿಪಿ, ಬ್ಯಾಂಕ್ ವಿವರ, ಪಾನ್ ಕಾರ್ಡ್ ವಿವರ ಹಂಚಿಕೊಳ್ಳಲೇಬಾರದು.Last Updated 13 ಜನವರಿ 2021, 5:20 IST